
ಪುತ್ತೂರು:ಕೆಮ್ಮಿಂಜೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಹುಲಿ ವೇಷದ ಸಂದರ್ಭ ತಾಸೆಯ ಬಳಗದಲ್ಲಿ ಗುರುತಿಸಿಕೊಳ್ಳುತ್ತಿದ್ದ ಮತ್ತು ನೇಮ ಇನ್ನಿತರ ಕಾರ್ಯಕ್ರಮಗಳಲ್ಲಿ ಡೋಲು ಬಾರಿಸುತ್ತಿದ್ದ ಕೀರ್ತಿ ಯಾನೆ ರಕ್ಷಿತ್ ಜೋಗಿ(30) ಅಲ್ಪಕಾಲದ ಅಸೌಖ್ಯದಿಂದ ಜೂನ್ 27 ರಂದು ಮೃತಪಟ್ಟ ಘಟನೆ ನಡೆದಿದೆ.
ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರು ತಾಯಿ, ಅಜ್ಜಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.






