
ಪುತ್ತೂರು : ನಗರದ ಪ್ರತಿಷ್ಠಿತ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತನ್ನ ಬೊಳುವಾರು ಶಾಖೆಯಲ್ಲಿ ಜೂನ್ 28 ಮತ್ತು 29 ರಂದು ಎರಡು ದಿನಗಳ ಕಾಲ ಉಚಿತ ಥೈರಾಯಿಡ್ (TSH) ಹಾಗೂ ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಿದೆ.
ಶಿಬಿರದ ಪ್ರಯುಕ್ತ, ಎಲ್ಲಾ ಮಾದರಿಯ ರಕ್ತ ಪರೀಕ್ಷಾ ಪ್ಯಾಕೇಟ್ಗಳ ಮೇಲೆ ಶೇ. 10 ರಿಂದ 20 ರಷ್ಟು ವಿಶೇಷ ರಿಯಾಯಿತಿ ಇರಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಂಡು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವಂತೆ ಕೋರಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸ್ಥೆಯು ಮನವಿ ಮಾಡಿದೆ.
ಧನ್ವಂತರಿ ಲ್ಯಾಬ್ಬ ವೈಶಿಷ್ಟ್ಯಗಳು:
ಅತ್ಯಾಧುನಿಕ ತಂತ್ರಜ್ಞಾನ: ಬೆಂಗಳೂರು, ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಲಭ್ಯವಿರುವ ಸಂಪೂರ್ಣ ಸ್ವಯಂಚಾಲಿತ ಉಪಕರಣಗಳ ಮೂಲಕ ಪರೀಕ್ಷೆಗಳನ್ನು ನಡೆಸಿ ನಿಖರ ಫಲಿತಾಂಶ ನೀಡಲಾಗುತ್ತದೆ.
ಅನುಭವಿ ಸಿಬ್ಬಂದಿ: 50 ವರ್ಷಗಳಿಗೂ ಮೀರಿದ ಸಂಯೋಜಿತ ಅನುಭವ ಹೊಂದಿರುವ ನುರಿತ ತಂತ್ರಜ್ಞರ ತಂಡ ಇಲ್ಲಿದೆ.
ವ್ಯಾಪಕ ಜಾಲ: ಪುತ್ತೂರಿನ ದರ್ಬೆ, ಬೊಳುವಾರು, ನೆಹರೂನಗರ ಮಾತ್ರವಲ್ಲದೆ, ಸುಳ್ಯ, ವಿಟ್ಲ, ಕೆಯ್ಯರು ಮತ್ತು ಈಶ್ವರಮಂಗಲದಲ್ಲಿಯೂ ಸಂಸ್ಥೆಯು ತನ್ನ ಶಾಖೆಗಳನ್ನು ಹೊಂದಿದೆ






