ಪಂಜಾಬ್‌ನ (Punjab) ಫಿರೋಜ್ಪುರ (Firozpur) ಜಿಲ್ಲೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್‌ (Cricket) ಪಂದ್ಯದ ವೇಳೆ ಕ್ರಿಕೆಟ್ ಆಟಗಾರನೊಬ್ಬ ಹೃದಯಾಘಾತದಿಂದ (Heart Attack) ಕುಸಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿಪಿಆರ್ ಮಾಡಿದರೂ ಪ್ರಯೋಜನವಾಗಿಲ್ಲ.ಕ್ರಿಕೆಟ್‌ ಆಟಗಾರ ಹರ್ಜೀತ್‌ ಸಿಂಗ್‌ ಸಿಕ್ಸರ್‌ ಬಾರಿಸಿದ ನಂತ ಮೊಣಕಾಸಿನ ಮೇಲೆ ಕುಸಿದು ಬಿದ್ದಿದ್ದು, ತಕ್ಷಣವೇ ತಂಡದ ಅನೇಕ ಜನರು ಅವರ ಬಳಿ ಬಂದಿದ್ದಾರೆ. ತಂಡದ ಸದಸ್ಯರು ಬೇಗನೆ ಅವರ ಸಹಾಯಕ್ಕೆ ಧಾವಿಸಿದ್ದರು, ಅಲ್ಲದೇ ಸಿಪಿಆರ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಪ್ರಜ್ಞೆ ಮರಳಿ ಬರಲಿಲ್ಲ. ಸ್ವಲ್ಪ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಾಗುತ್ತಿದೆ.

ವೈರಲ್‌ ಆಗ್ತಿದೆ ಆಟಗಾರನ ಕೊನೆ ಕ್ಷಣದ ವಿಡಿಯೋ
ಹರ್ಜೀತ್‌ ಸಿಂಗ್‌ ಅವರ ಕೊನೆ ಕ್ಷಣದ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋದಲ್ಲಿ ಸಿಂಗ್‌ ಬ್ಯಾಟ್‌ ಬೀಸಲು ತಯಾರಿ ಮಾಡುತ್ತಿರುವುದನ್ನ ಕಾಣಬಹುದು. ಅಲ್ಲದೇ, ಅವರು ಸಿಕ್ಸರ್‌ ಸಹ ಹೊಡೆದಿದ್ದು, ಕೆಲವೇ ಕ್ಷಣಗಳಲ್ಲಿ ಪಿಚ್‌ನ ಮಧ್ಯ ಭಾಗಕ್ಕೆ ಬಂದು ಮೊಣಕಾಲನ್ನೂರಿ ಕುಸಿದುಬಿದ್ದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!