
ಭಾ ರತದಿಂದ ಸಂಸದ ಶಶಿತರೂರ್ ನೇತೃತ್ವದಲ್ಲಿ ಸರ್ವಪಕ್ಷ ಸಂಸದರ ನಿಯೋಗ ಅಮೆರಿಕಕ್ಕೆ ತೆರಳಿದೆ. ಇದರಲ್ಲಿ ಬಿಜೆಪಿ, ಲೋಕಶಕ್ತಿ, ಟಿಡಿಪಿ, ಶಿವಸೇನೆ, ಜಾರ್ಖಾಂಡ್ ಮುಕ್ತಿ ಮೋರ್ಚಾಸೇರಿದಂತೆ ಹಲವು ಪಕ್ಷಗಳ ಸಂಸದರು ಇದ್ದರು. ಇದ್ರಲ್ಲಿ 34ರ ಹರೆಯದ, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಇದ್ದರು..
ನಿಯೋಗಕ್ಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ಅವಕಾಶ ನೀಡಲಾಗಿತ್ತು.. ಆದ್ರೆ ಸಂಸದ ತೇಜಸ್ವಿ ತಾನೊಬ್ಬ ಅತ್ಯಂತ ಪ್ರಭಾವಿ ಅನ್ನೋದನ್ನ ತೋರಿಸಿಕೊಳ್ಳೋಕೆ ಹೋಗಿ ಮುಖಭಂಗಕ್ಕೀಡಾಗಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ರನ್ನು ಏಕಾಂಗಿ ಭೇಟಿಗೆ ಪ್ರಯತ್ನಿಸಿ ಅವಮಾನ ಎದುರಿಸಿದ್ದಾರೆ. ಸಂಸದ ತೇಜಸ್ವಿ ತಮ್ಮಿಬ್ಬರ ಸ್ನೇಹಿತರೊಂದಿಗೆ ಪ್ಲೋರಿಡಾ ನಗರದಲ್ಲಿರುವ ಮಾರ್ ಅ ಲಾಗೊ ಎಸ್ಟೇಟ್ಗೆ ಭೇಟಿ ನೀಡಲು ಯತ್ನಿಸಿದ್ದಾರೆ. ಆದ್ರೆ ಈ ವೇಳೆ ಟ್ರಂಪ್ ಇದಕ್ಕೆ ನಿರಾಕರಿಸಿ, ವಾಪಸ್ ಕಳಿಸಿದ್ದಾರೆ.






