
ಮುಂಡೂರು, ಜುಲೈ 10: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಸಂಘಟನೆಯ ಮುಂಡೂರು ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭವು ವಿನೋದ್ ಶೆಟ್ಟಿ ಪಂಜಳ ಅವರ ಮನೆಯಲ್ಲಿ ಜರುಗಿತು. ಈ ಸಭೆಯು ಟ್ರಸ್ಟ್‌ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ, ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ ಹಾಗೂ ಪ್ರವೀಣ್ ಶೆಟ್ಟಿ ತಿಂಗಳಾಡಿ ಯವರ ಸಮ್ಮುಖದಲ್ಲಿ ನಡೆಸಲಾಯಿತು.
ಈ ವೇಳೆ ಮುಂಡೂರು ಗ್ರಾಮ ಘಟಕದ ಅಧ್ಯಕ್ಷರಾಗಿ ಬಾಲಚಂದ್ರ ಗೌಡ ಕಡ್ಯ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಕಲ್ಲಮ ಅವರನ್ನು ಆಯ್ಕೆ ಮಾಡಲಾಯಿತು.
ಮತ್ತು, ಬೂತ್ ಮಟ್ಟದಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಹೀಗಿದ್ದಾರೆ:
ಬೂತ್ ಸಂಖ್ಯೆ 189:
ಅಧ್ಯಕ್ಷ: ಹರೀಶ್ ಬಿಕೆ
ಕಾರ್ಯದರ್ಶಿ: ಹರೀಶ್ ಪೂಜಾರಿ ಹಿಂದಾರು
ಬೂತ್ ಸಂಖ್ಯೆ 190:
ಅಧ್ಯಕ್ಷ: ಕುಶಾಲಪ್ಪ ಗೌಡ ಕಡ್ಯ
ಕಾರ್ಯದರ್ಶಿ: ಸಂತೋಷ್ ತೌಡಿಂಜ
ಬೂತ್ ಸಂಖ್ಯೆ 191:
ಅಧ್ಯಕ್ಷ: ಮೋನಪ್ಪ ಗೌಡ ಗುತ್ತಿನಪಾಲು
ಕಾರ್ಯದರ್ಶಿ: ಬಾಲಕೃಷ್ಣ ಶೆಟ್ಟಿ ಅಂಬಟಾ
ಈ ಸಮಾರಂಭದಲ್ಲಿ ಮುಂಡೂರು ಗ್ರಾಮದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಪಟ್ಟೆ, ಮಾಜಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಕಣ್ಣಾರ್ನುಜಿ, ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಟ್ಟಿ ಪಟ್ಟೆ, ಬಾಲಕೃಷ್ಣ ಶೆಟ್ಟಿ ಪಂಜಳ, ಹಿರಿಯರಾದ ಶೇಸಪ್ಪ ಆಚಾರ್ಯ ಮುಂಡೂರು, ಸೀತಾರಾಮ ಆಚಾರ್ಯ ಪಂಜಳ, ಸುಂದರ ನಾಯ್ಕ ಬಿಕೆ, ಬಾಲಕೃಷ್ಣ ಕುರೆಮಜಲು, ಬಾಲಚಂದ್ರ ಸೊರಕೆ, ಸೇಸಪ್ಪ ಶೆಟ್ಟಿ ಪೋನೋನಿ, ಸಂತೋಷ್ ಶೆಟ್ಟಿ ಪಂಜಳ, ವಿನೋದ್ ಶೆಟ್ಟಿ ಪಂಜಳ, ಅವಿನಾಶ್ ಕೇದಗೆದಡಿ ಮತ್ತು ಇನ್ನೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.






