
ಪುತ್ತೂರು: ಬನ್ನೂರು ನಿವಾಸಿ ಹಾಗೂ ಉದ್ಯಮಿ ಸೀತಾರಾಮ ಶೆಟ್ಟಿ (65 ವ.) ಅವರು ಜು 15 ಮಂಗಳವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೇಳೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅಪ್ಪಟ ಕನ್ನಡಾಭಿಮಾನಿ ಆಗಿದ್ದ ಇವರು ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜಗಳನ್ನು ವಿತರಿಸುತ್ತಿದ್ದರು. ಯಕ್ಷಗಾನ ಹಾಗೂ ಕನ್ನಡ ಸಂಸ್ಕೃತಿಯ ಭಕ್ತರಾಗಿದ್ದ ಅವರು, ಕಾಸರಗೋಡು ದಿ. ಚಿದಾನಂದ ಕಾಮತ್ ಅವರು ಸ್ಥಾಪಿಸಿದ “ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು” ವತಿಯಿಂದ ಆಯೋಜಿಸಲಾಗುತ್ತಿದ್ದ ಎಲ್ಲಾ ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು.
ಮೃತರು ಪುತ್ರರಾದ ಉದ್ಯಮಿ ರೋಶನ್ ರೈ, ರೋಹಿತ್, ಪುತ್ರಿ ರೋಜಾ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.






