ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿ ಅಧಿಕೃತ ವರ್ಗಾವಣೆಯ ಆದೇಶವನ್ನು ಸರ್ಕಾರ ಜಾರಿಗೊಳಿಸಿದ್ದು, ಬಂಟ್ವಾಳ ನಗರ ಠಾಣೆಯ ಉಪನಿರೀಕ್ಷಕ (ಎಸ್.ಐ) ರಾಮಕೃಷ್ಣ ಅವರನ್ನು ವಿಟ್ಲ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಸ್ಥಳೀಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ್ ಶೆಟ್ಟಿ ಮತ್ತು ಪುಂಜಾಲಕಟ್ಟೆ ಎಸ್.ಐ ಆಗಿದ್ದ ನಂದಕುಮಾರ್ ಅವರು ಇತ್ತೀಚೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿ ಹೊಂದಿರುವ ಹಿನ್ನೆಲೆಯಲ್ಲಿ, ಖಾಲಿಯಾಗಿದ್ದ ಪುಂಜಾಲಕಟ್ಟೆ ಠಾಣೆಗೆ ಚಿಕ್ಕಮಗಳೂರಿನಿಂದ ರಾಜೇಶ್ ಕೆ.ವಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಂದೀಪ್ ಶೆಟ್ಟಿ ಅವರು ಹಿಂದೆಯೂ ವಿಟ್ಲ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು, ರಾಜೇಶ್ ಕೆ.ವಿ ಅವರು ಬಂಟ್ವಾಳ ಟ್ರಾಫಿಕ್ ಮತ್ತು ಉಪ್ಪಿನಂಗಡಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಅನುಭವ ಪಡೆದ ಅಧಿಕಾರಿಗಳಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!