ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದ ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜು, ಆಸ್ಪತ್ರೆ, ಆಯುರ್ವೇದಿಕ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಜುಲೈ 27ರಂದು ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಈ ಶಿಬಿರ ಬೆಳಿಗ್ಗೆ 9 ಗಂಟೆಗೆ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಶಾಲೆಯ ವಠಾರದಲ್ಲಿ ಆರಂಭವಾಗಲಿದ್ದು, ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಎಂ.ಡಿ ಹಾಗೂ ಎ.ಪಿ.ಎಲ್.ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಭಾಗವಹಿಸಿ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎವಿಜಿ ಶಾಲೆಯ ಆಡಳಿತ ಸಮಿತಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಲಿದ್ದಾರೆ. ಎ.ವಿ.ಜಿ ಅಸೋಸಿಯೇಟ್ಸ್‌ನ ಎ.ವಿ. ನಾರಾಯಣ, ನಗರಸಭೆ ಸದಸ್ಯೆ ಗೌರಿ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಥಿತಾ ಎನ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಯುವಕ ಮಂಡಳದ ಸದಸ್ಯ ದಯಾನಂದ ಗೌಡ, ದಿನೇಶ್ ಸಾಲಿಯಾನ್, ಉದಯ ಕುಮಾರ್, ಲೋಕೇಶ್, ಹಾಗೂ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಶಿಬಿರದ ಪ್ರಮುಖ ವೈದ್ಯಕೀಯ ಸೇವೆಗಳು:

ಜನರಲ್ ಮೆಡಿಸಿನ್

ಶಸ್ತ್ರಚಿಕಿತ್ಸೆ

ಹೆರಿಗೆ ಮತ್ತು ಸ್ತ್ರೀರೋಗ

ಎಲುಬು ಮತ್ತು ಕೀಲು ರೋಗ

ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ

ಮಕ್ಕಳ ಮತ್ತು ನೇತ್ರ ಚಿಕಿತ್ಸಾ ವಿಭಾಗ

ಚರ್ಮ ಮತ್ತು ಲೈಂಗಿಕ ರೋಗ

ಮನೋರೋಗ ಚಿಕಿತ್ಸಾ ವಿಭಾಗ

ಶ್ವಾಸಕೋಶ ಚಿಕಿತ್ಸಾ ವಿಭಾಗ

ಆಯುರ್ವೇದ ಚಿಕಿತ್ಸಾ ವಿಭಾಗ


ವಿಶೇಷ ಸೌಲಭ್ಯಗಳು:
ಇಸಿಜಿ, ಬಿ.ಪಿ, ಶುಗರ್ ತಪಾಸಣೆಗಳು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ಸೌಲಭ್ಯವಿದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಭಾಗವಹಿಸುವವರು ತಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.

ಹೆಚ್ಚಿನ ಮಾಹಿತಿಗೆ:
📞 94484 85983 / 73380 85983
(ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಕಟಣೆ)

Leave a Reply

Your email address will not be published. Required fields are marked *

Join WhatsApp Group
error: Content is protected !!