

ಮಂಗಳೂರು, ಜು. 25: ದಕ್ಷಿಣ ಕನ್ನಡ ಜಿಲ್ಲೆಯ ನಾನ್-ಸಿಆರ್‌ಝಡ್ ಪ್ರದೇಶದಲ್ಲಿ ಗುರುತಿಸಲ್ಪಟ್ಟ 15 ಮರಳು ಬ್ಲಾಕ್‌ಗಳಿಂದ ಮಂಜೂರಾದ ಮರಳನ್ನು ಸಾರ್ವಜನಿಕರು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ DK SAND BAZAAR APP ಮುಖಾಂತರ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆಯಂತೆ, ಮರಳು ಸಾಗಾಟಕ್ಕೆ ಇಚ್ಛಿಸುವ ವಾಹನ ಮಾಲೀಕರು ತಮ್ಮ ವಾಹನಗಳನ್ನು DK SAND BAZAAR APP ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಈ ಕುರಿತು ಸಾರ್ವಜನಿಕ ಪ್ರಕಟಣೆಯು ಈಗಾಗಲೇ ಜಾರಿಯಲ್ಲಿದೆ.
ದಿನಾಂಕ 16-03-2025ರಿಂದ ಈ ಆಪ್ ಮೂಲಕ ಸಾರ್ವಜನಿಕರಿಗೆ ಮರಳು ವಿತರಣೆಯ ಕಾರ್ಯಾರಂಭವಾಗಿದ್ದು, ಮರಳು ಅವಶ್ಯಕತೆ ಇರುವವರು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ (DK SAND BAZAAR APP ಅಥವಾ ವೆಬ್‌ಸೈಟ್ www.dksandbazaar.com) ಮುಖಾಂತರ ಮರಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.
ಲಭ್ಯವಿರುವ ಮರಳು ಪ್ರಮಾಣ:
ಒಟ್ಟು ಮರಳು ದಾಸ್ತಾನು: 27,550 ಮೆಟ್ರಿಕ್ ಟನ್
ಇದುವರೆಗೆ ವಿತರಣೆಗೊಂಡ ಮರಳು: 12,126 ಮೆಟ್ರಿಕ್ ಟನ್
ಪ್ರಸ್ತುತ ಲಭ್ಯವಿರುವ ಮರಳು: 15,424 ಮೆಟ್ರಿಕ್ ಟನ್
ಜಿಲ್ಲೆಯ 15 ಮರಳು ಬ್ಲಾಕ್‌ಗಳಲ್ಲಿ 3,30,405 ಮೆಟ್ರಿಕ್ ಟನ್ ಮರಳು ಗಣಿಗಾರಿಕೆಗೆ ಲಭ್ಯವಿದ್ದು, ಪರಿಸರ ವಿಮೋಚನಾ ಪತ್ರದನ್ವಯ ಪ್ರತಿ ವರ್ಷ ಜೂನ್ 5ರಿಂದ ಅಕ್ಟೋಬರ್ 15ರ ವರೆಗೆ ಮರಳು ಗಣಿಗಾರಿಕೆಗೆ ನಿಷೇಧವಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ನೇರ ಗಣಿಗಾರಿಕೆ ನಡೆಯದು, ಬದಲಿಗೆ ದಾಸ್ತಾನು ಕೇಂದ್ರಗಳಲ್ಲಿರುವ ಮರಳನ್ನು ಮಾತ್ರ ಪೂರೈಸಲಾಗುವುದು.
ಮಹತ್ವದ ಸೂಚನೆ:
ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಸಾಗಾಟಕ್ಕೆ ಅನುಮತಿಯಿಲ್ಲ.
ಬುಕಿಂಗ್‌ನಲ್ಲಿ ತಾಂತ್ರಿಕ ತೊಂದರೆ ಎದುರಾದರೆ ಮೊಬೈಲ್: 6364019555 ಅನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಹಿರಿಯ ಭೂವಿಜ್ಞಾನಿಯವರು
ಗಣಿ ಮತ್ತು ಭೂವಿಜ್ಞಾನ ಇಲಾಖೆ,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು
ದೂರವಾಣಿ: 0824-2429932






