
ಪುತ್ತೂರು: ಪುತ್ತೂರಿನ ಹೆಸರಾಂತ ಚಿನ್ನಾಭರಣ ಮಳಿಗೆ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ‘ಆಟಿದ ಕೂಟ’ದ ಅಂಗವಾಗಿ ವಿಶೇಷ ಕಾರ್ಯಕ್ರಮವು ಜುಲೈ 26ರಂದು ವಿಜೃಂಭಣೆಯಿಂದ ನಡೆಯಿತು.
ಆಟಿ ತಿಂಗಳು ಮತ್ತು ನಾಗರಪಂಚಮಿ ಹಬ್ಬದ ಸಾಂಸ್ಕೃತಿಕ ಹಿನ್ನೆಲೆಯಲ್ಲಿಇ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂಭ್ರಮದ ಸಂದರ್ಭದಲ್ಲಿಇ ಗ್ರಾಹಕರು ಹಾಗೂ ಸಿಬ್ಬಂದಿಗಳಿಗೆ ಪರಂಪರೆಯ ರುಚಿಕರ ತಿನಿಸುಗಳಾದ ಪತ್ರೋಡೆ, ಗೇನಸಾಲೆ ಮತ್ತು ಆರೋಗ್ಯಕರ ಕಷಾಯವನ್ನು ಉಪಹಾರವಾಗಿ ನೀಡಲಾಗಿತ್ತು.
ಸಂಸ್ಥೆಯ ನಿರ್ವಾಹಕರು ಪ್ರತಿವರ್ಷವೂ ಆಟಿ ತಿಂಗಳಲ್ಲಿ ಈ ರೀತಿಯ ಸಾಂಪ್ರದಾಯಿಕ ಕೂಟವನ್ನು ಹಮ್ಮಿಕೊಳ್ಳುವುದು ಮತ್ತು ಗ್ರಾಹಕರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳುವುದು ತಮ್ಮ ಧೋರಣೆಯ ಭಾಗವಾಗಿದೆ ಎಂದು ತಿಳಿಸಿದರು. ಗ್ರಾಹಕರಿಂದ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಕಾರ್ಯಕ್ರಮವು ಆನಂದದ ಕ್ಷಣಗಳನ್ನು ನೀಡಿತು.






