ಬಂಟ್ವಾಳ, ಜುಲೈ 28:ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿ ನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3 ರಿಂದ ಜುಲೈ 22, 2025 ರ ಅವಧಿಯಲ್ಲಿ ಸಂಭವಿಸಿದ ರೂ. 2,20,000 ಮೌಲ್ಯದ ಒಣ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಜುಲೈ 23 ರಂದು ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 112/2025 ರಂತೆ ಭಾರತೀಯ ದಂಡ ಸಂಹಿತೆಯ ಕಲಂ 306 ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಶಿವಕುಮಾರ ಬಿ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ನಿರೀಕ್ಷಕ ಮಂಜುನಾಥ್ ಟಿ., ಎಎಸ್‌ಐ ಜಿನ್ನಪ್ಪ ಗೌಡ ಹಾಗೂ ಸಿಬ್ಬಂದಿಯಾದ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ್, ಮಾರುತಿ ಮತ್ತು ಹನುಮಂತ ಎಂಬವರನ್ನೊಳಗೊಂಡ ತಂಡ ಕೈಗೊಂಡಿತು.

ತಪಾಸಣೆಯಾದ ಮೌಲ್ಯವಂತಿಕೆಯಿಂದ ದಿನಾಂಕ 28-07-2025 ರಂದು ಸುಳ್ಯ ಪೈಚಾರು ಗ್ರಾಮದ ಸತೀಶ್ (29 ವರ್ಷ) ಎಂಬಾತನನ್ನು ಬಂಧಿಸಲಾಗಿದ್ದು, ಅವನಿಂದಾಗಿ ರೂ. 74,000 ಮೌಲ್ಯದ 15 ಚೀಲ ಒಣ ಅಡಿಕೆ, ಮಾರಾಟ ಮಾಡಿದ ಹಣ ರೂ. 70,000 ಹಾಗೂ ಕೃತ್ಯಕ್ಕೆ ಬಳಸಿದ ರೂ. 80,000 ಮೌಲ್ಯದ ಆಪೆ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿತ ವಸ್ತುಗಳ ಮೌಲ್ಯ ರೂ. 2,24,000 ಆಗಿದೆ.

ಬಂಧಿತನನ್ನು ಮಾನ್ಯ ಬಂಟ್ವಾಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!