
ಬೆಳ್ತಂಗಡಿ, ಆಗಸ್ಟ್ 3:ಸಾಮಾಜಿಕ ಜಾಲತಾಣದ ಮೂಲಕ ಕೋಮುಸೌಹಾರ್ಧತೆಗೆ ಧಕ್ಕೆಯಾಗುವ ರೀತಿಯಲ್ಲಿ ಸಂದೇಶವೊಂದನ್ನು ಹರಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಲಾಗಿದೆ.
ಪಿರ್ಯಾದಿದಾರರಾದ ಉಜಿರೆ ನಿವಾಸಿ ಕಲಂದರ್ ಪುತ್ತುಮೋನು (42) ಅವರು ನೀಡಿದ ದೂರಿನಂತೆ, ಅವರು ತಮ್ಮ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಿರುವಾಗ, ಫೇಸ್ಬುಕ್‌ನ ‘ಕುಲುಮೆ’ ಎಂಬ ಗ್ರೂಪ್‌ನಲ್ಲಿ AyshuAysha ಎಂಬ ಖಾತೆ ಹೊಂದಿರುವ ಬಳಕೆದಾರನೊಬ್ಬನು ವಿಭಿನ್ನ ಕೋಮುಗಳ ನಡುವೆ ವೈಷಮ್ಯ ಹುಟ್ಟಿಸುವಂತಹ ಸುಳ್ಳು ವದಂತಿಗಳನ್ನು ಒಳಗೊಂಡ ಪೋಸ್ಟ್‌ನ್ನು ಪ್ರಕಟಿಸಿರುವುದು ದೃಢಪಟ್ಟಿದೆ.
ಈ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ.: 70/2025 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್‌ಗಳು 353(1)(b) ಮತ್ತು 353(2) ಅನ್ವಯ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.






