
ಮಂಗಳೂರುದಲ್ಲಿ ನಡೆದ ‘ಆಟಿದ ಕೂಟ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ವೇಷಧಾರಿಯಲ್ಲಿ ಅಪಹಾಸ್ಯ ಅಭಿನಯ ಮಾಡಲಾಗಿದೆ ಎಂಬ ಆರೋಪದ ಮೇಲೆ ಕಲಾವಿದ ರವಿ ರಾಮಕುಂಜ ಹಾಗೂ ನಿರ್ದೇಶಕ ಪುಷ್ಪರಾಜ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದೂರಿನಲ್ಲಿ, ಶ್ರೀ ಕೃಷ್ಣನ ವೇಷದಲ್ಲಿ ಅಶ್ಲೀಲ ಭಂಗಿ, ಅಸಭ್ಯ ಪದ ಬಳಕೆ ಹಾಗೂ ಅವಹೇಳನಕಾರಿ ನಟನೆ ಮಾಡಿದ ಮೂಲಕ ಹಿಂದೂ ಧರ್ಮೀಯ ಭಾವನೆಗೆ ಧಕ್ಕೆಯಾಗಿರುವುದಾಗಿ ಉಲ್ಲೇಖಿಸಲಾಗಿದೆ. ಕಾರ್ಯಕ್ರಮದ ಆಯೋಜಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ದೂರು ಸಲ್ಲಿಕೆಯಲ್ಲಿ ಖ್ಯಾತ ನ್ಯಾಯವಾದಿ ಉದಯ ಕುಮಾರ್ ಬಿ.ಕೆ., ವಿಹಿಪ್ ಪ್ರಮುಖ ಮೋಹನ್ ಬೆಳ್ತಂಗಡಿ, ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.






