ಹಲವು ಸಂಸ್ಥೆಯನ್ನು ಪ್ರಾರಂಭಿಸಿ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲಿ:ರೋ ಎಂ.ಜಿ. ರಫೀಕ್

ಗ್ರಾಹಕರ ಸಹಕಾರದಿಂದ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ:ಬಿ.ಎಸ್. ವಿನೋದ್ ಮಡಿಕೇರಿ

ಆಕಾಶದೆತ್ತರದ ಕನಸು ಹೊತ್ತಿರುವ ಅಬ್ದುಲ್ ಲತೀಫ್ ಅವರ ಉದ್ದಿಮೆ ಯಶಸ್ವಿಯಾಗಲಿ :ಪತ್ರಕರ್ತ ಸಂಶುದ್ದೀನ್ ಸಂಪ್ಯ

ನಯ ಆಕಾಶ್ ಫೂಟ್‌ವೇರ್‌ ಗ್ರಾಹಕರ ಆಶೋತ್ತರಗಳನ್ನು ಪೂರೈಸಲಿ:ಅರುಣ್ ಕುಮಾರ್

“ಜನಸಾಮಾನ್ಯರ ಅನುಕೂಲಕ್ಕಾಗಿ ಆರಂಭಿಸಿದ ಸಂಸ್ಥೆ :ದೀಪಕ್

ಪುತ್ತೂರು ಪುತ್ತೂರು ಟೌನ್ ಪೊಲೀಸ್ ಸ್ಟೇಷನ್ ಬಳಿ ಇರುವ ಹೆಗ್ಡೆ ಆರ್ಕೆಡ್ ಬಿಲ್ಡಿಂಗ್‌ನಲ್ಲಿ ನೂತನವಾಗಿ ಶೂ ಹಾಗೂ ಚಪ್ಪಲಿಗಳ ಬೃಹತ್ ಮಳಿಗೆ ನಯ ಆಕಾಶ್ ಫೂಟ್ ವೇರ್ ಆ. 8 ರಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಸಂಸ್ಥೆಯ ಮಾಲಕರ ತಾಯಿ ಜೈನಾಬಿ ಕೂರ್ನಡ್ಕ ರವರು ಉದ್ಘಾಟಿಸಿ ಶುಭಹಾರೈಸಿದರು.

ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಬ್ಬಾಸ್ ಮದನಿ ದುವಾ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಟಿ ಟೆನ್ಸ್ ಆ್ಯಂಡ್ ಕಂಪನಿ ಲಿಮಿಟೆಡ್ ನ ಸೇಲ್ಸ್ ಮ್ಯಾನೇಜರ್ ಬಿ.ಎಸ್. ವಿನೋದ್ ಮಡಿಕೇರಿ ರವರು ಮಾತನಾಡಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಚಪ್ಪಲಿಗಳು ಸಿಗಬೇಕು ಎಂಬ ಉದ್ದೇಶದಿಂದ ವಿವಿಧ ಕಂಪನಿಗಳ ಚಪ್ಪಲಿ ಹಾಗೂ ಶೂಗಳ ಮಳಿಗೆಯನ್ನು ಅಬ್ದುಲ್ ಲತೀಫ್‌ರವರು ಆರಂಭಿಸಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತಾಗಬೇಕು ಈ ಉದ್ದಿಮೆ ಜನಸಾಮಾನ್ಯರಿಗೆ ಹೊಂದಿಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಗ್ರಾಹಕರು ಸಹಕರಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಸಂಶುದ್ದೀನ್ ಸಂಪ್ಯ ರವರು ಮಾತನಾಡಿ ಅಬ್ದುಲ್ ಲತೀಫ್ ರವರು ತಮ್ಮ ಮೂರನೇ ಸಂಸ್ಥೆಯಾದ ನಯ ಆಕಾಶ್ ಪೂಟ್ ವೇರ್ ಪ್ರಾರಂಭಿಸುವ ಮೂಲಕ ತನ್ನ ಸಂಸ್ಥೆಯ ಹೆಸರಿನಂತೆ ಆಕಾಶದೆತ್ತರಕ್ಕೆ ಕನಸುಗಳನ್ನು ಹೊತ್ತುಕೊಂಡು ಆಕಾಂಕ್ಷೆಯೊಂದಿಗೆ ಪ್ರಾರಂಭಿಸಿರುವ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಇದಕ್ಕಾಗಿ ಎಲ್ಲರ ಆಶೀರ್ವಾದ ಸಹಕಾರ ಅಗತ್ಯವಾಗಿದೆ ಎಂದರು.

ಮುಖ್ಯ ಅತಿಥಿ ಮಾಲಕ ಅರುಣ್ ಕುಮಾರ್‌ರವರು ಮಾತನಾಡಿ ಗ್ರಾಹಕರಿಂದ ಗ್ರಾಹಕರನ್ನು ಆಕರ್ಷಿಸುವ ಕೆಲಸ ನಡೆದಾಗ ಇಂತಹ ಸಂಸ್ಥೆಗಳು ಮತ್ತಷ್ಟು ಬೆಳೆಯಲು ಸಹಕಾರಿಯಾಗುತ್ತದೆ ಇಂದಿಲ್ಲಿ ಪ್ರಾರಂಭಗೊಂಡ ನಯಾ ಆಕಾಶ್ ಪೂಟ್ ವೇರ್ ಸಂಸ್ಥೆ ಗ್ರಾಹಕರ ಆಶೋತ್ತರಗಳನ್ನು ಪೂರೈಸುವ ಸಂಸ್ಥೆಯಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಸೋಜಾ ಮೆಟಲ್ ಮಾರ್ಟ್‌ನ ದೀಪಕ್ ಮಿನಿಜಸ್‌ರವರು ಮಾತನಾಡಿ ಜನಸಾಮಾನ್ಯರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಅವರ ಅನುಕೂಲತೆಗೆ ತಕ್ಕಂತೆ ಆರಂಭಿಸಿದ ನಯ ಆಕಾಶ್ ಫೂಟ್ ವೇರ್ ಸಂಸ್ಥೆಯು ಗ್ರಾಹಕರಿಗೆ ತೃಪ್ತಿ ನೀಡುವ ಸಂಸ್ಥೆ ಯಾಗಲಿ ಎಂದು ಹೇಳಿದರು.

ಚಪ್ಪಲ್ ಬಜಾರ್ ಮಾಲಕ ಎಂ.ಜಿ. ರಫೀಕ್ ರವರು ಮಾತನಾಡಿ ನೂತನವಾಗಿ ಪ್ರಾರಂಭಗೊಂಡ ನಯ ಆಕಾಶ್ ಫೂಟ್ ವೇರ್ ಮಾಲಕ ಅಬ್ದುಲ್ ಲತೀಫ್ ರವರು ಕಳೆದ 10 ವರ್ಷಗಳಿಂದ ನಮ್ಮೊಂದಿಗೆ ಕೆಲಸಮಾಡಿಕೊಂಡಿದ್ದು ಯಾವುದೇ ವೈರತ್ವ ಇಲ್ಲದ ಉತ್ತಮ ಗುಣನಡತೆಯ ಯುವಕನಾಗಿದ್ದಾರೆ. ಅವರ ಮೂರನೆಯ ಸಂಸ್ಥೆಯನ್ನು ಇಲ್ಲಿ ಪ್ರಾರಂಭಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಮುಂದೆ ಬಂದಿದ್ದಾರೆ ಅವರ ಈ ಸೇವೆ ಎಲ್ಲಾ ಗ್ರಾಹಕರಿಗೆ ತೃಪ್ತಿಯನ್ನು ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಸೀಫ್, ಬದ್ರಿಯಾ ಮಸೀದಿಯ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಝಕಾರಿಯ ಸಂಟ್ಯಾರ್, ದರ್ಬೆ ನ್ಯೂ ಆಕಾಶ್ ಫೂಟ್ ವೇರ್ ಮಾಲಕ ಝಿಯಾದ್, ಹಾರೀಶ್ ಫೂಟ್ ವೇರ್ ಮಾಲಕ ಸಲೀಂ, ಶಫೀಕ್ ಸುರಯ್ಯ, ದರ್ಬೆ ಎ.ಆರ್. ಜ್ಯೂಸ್ ಸೆಂಟರ್ ನ ಮಾಲಕ ಅಬ್ದುಲ್ ರಹಿಮಾನ್, ಕೂರ್ನಡ್ಕ, ಮರಿಯಮ್ ಟ್ರೇಡರ್ಸ್ ನ ಮಾಲಕ ಹಾರೀಸ್, ಮದರ್ ಇಂಡಿಯಾ ಮಾಲಕ ಎಂ ಜಿ ಅಬ್ದುಲ್ ರಜಾಕ್, ಶರೀಫ್ ಕಾರ್ಜಲ್, ರಮ್ಲ, ಹುಸೇನ್, ಅಬ್ದುಲ್ ಅಜೀಜ್, ಕೂರ್ನಡ್ಕ, ಪ್ರಸನ್ನ ರೈ, ಚಿಂತನ್ ರೈ ಮುಹಮ್ಮದ್ ಕೂರ್ನಡ್ಕ, ಎಚ್ ನಾರಾಯಣ ಸಂಸ್ಥೆಯ ತಾರನಾಥ, ಮಂಜುನಾಥ ರೈ, ಅಕ್ಕರಿ ರೈ, ಆರ್.ಕೆ. ಜುವೆಲ್ಲರ್ಸ್‌ನ ಮಾಲಕ ಕೃಷ್ಣ, ಅಬ್ದುಲ್ ರಹೀಮಾನ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಹಾಗೂ ಪುರುಷರ10 ಸೈಜ್ ಶೂ, ಚಪ್ಪಲಿಗಳ, ಮೇಲೆ ಹೆಚ್ಚುವರಿ 5% ರಿಯಾಯಿತಿ ನೀಡಲಾಗುವುದು ಗ್ರಾಹಕರು ಇದರ ಸದುಪಯೋಗಗಳನ್ನು ಪಡೆದುಕೊಳ್ಳುವಂತೆ ಅವರು ವಿನಂತಿಸಿಕೊಂಡರು.
ಆಕಾಶ್ ಪೂಟ್‌ವೇರ್ ಮಾಲಕ ಅಬ್ದುಲ್ ಲತೀಫ್ ಸ್ವಾಗತಿಸಿ, ಮಾತನಾಡಿ ಇಂದಿಲ್ಲಿ ಪ್ರಾರಂಭಗೊಂಡ ನಮ್ಮ ಈ ಸಂಸ್ಥೆಯಲ್ಲಿ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಜನಪ್ರಿಯ ಬ್ರಾಂಡೆಡ್‌ನ ಶೂ ಹಾಗೂ ಚಪ್ಪಲಿಗಳನ್ನು ಅತಿ ಕಡಿಮೆ ದರದಲ್ಲಿ ನೀಡಲಾಗುವುದು. ಮಾತ್ರವಲ್ಲದೆ ಉದ್ಘಾಟನೆಯ ಅಂಗವಾಗಿ ಶೇಕಡ 30 ರಿಂದ ಶೇಕಡ 50 ರವರೆಗೆ ರಿಯಾಯಿತಿ ಕೂಡ ನೀಡಲಾಗುವುದು ಎಂದು ಹೇಳಿ ಸಹಕಾರ ಕೋರಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!