
ಚಾಮರಾಜನಗರದ (chamarajanagar) ಬಂಡೀಪುರದ (bandipura) ಕಾಡಿನ ಮಧ್ಯೆ ಸಿನಿಮಾ ಶೈಲಿಯ ಘಟನೆ ನಡೆದಿದ್ದು, ಹುಚ್ಚಾಟ ಮೆರೆದ ಪ್ರವಾಸಿಗನ (tourist)ಮೇಲೆ ಕಾಡಾನೆ (elephant)
ಅಟ್ಯಾಕ್ ಮಾಡಿದೆ.
ಫೋಟೋ ಹುಚ್ಚಿನಿಂದ ಆನೆ ದಾಳಿಗೆ ಒಳಗಾದ ಪ್ರಯಾಣಿಕ ಸಾವಿನ ದವಡೆಯಿಂದ ಪಾರಾಗಿದ್ದಾನೆ.ಫೋಟೋ ಗೀಳಿಗಾಗಿ ಆನೆ ಸನಿಹಕ್ಕೆ ತೆರಳಿದ್ದ ಪ್ರಯಾಣಿಕನ ಮೇಲೆ ಒಂಟಿಯಾನೆ ದಾಳಿ ನಡೆಸಿ ಗಾಯಗೊಳಿಸಿದೆ
ದಾಳಿಯಿಂದ ಪ್ರಜ್ಞೆತಪ್ಪಿ ರಸ್ತೆಯಲ್ಲಿಯೇ ಬಿದ್ದಿದ್ದ ವ್ಯಕ್ತಿಯನ್ನು ಸಂಬಂಧಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅನೆಯ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.
ದಾಳಿಗೊಳಗಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದರು.
ಆನೆಗಳು ಮರಿಗಳೊಂದಿಗೆ ಇರುವಾಗ ಮನುಷ್ಯರನ್ನು ಕಂಡರೆ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಮರಿಯ ರಕ್ಷಣೆ ಮಾಡಲು ಸಿಟ್ಟಿಗೇಳುವುದು ಸಹಜ, ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಪೋಟೋ ತೆಗೆಯಲು ಮುಂದಾದಾಗಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.






