ಭಾರತದ ವಿದೇಶಾಂಗ ಸಚಿವ ಎಂದೇ ಗುರುತಿಸಿಕೊಂಡಿರುವ ಎಸ್ ಜೈಶಂಕರ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಜೈಶಂಕರ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 70 ವರ್ಷದ ಜೈಶಂಕರ್ ರಾಯಭಾರಿ ಅಪಾರ ಅನುಭವ ಹೊಂದಿರುವ ಜೈಶಂಕರ್ ತಮ್ಮ ಖಡಕ್ ಮಾತುಗಳಿಂದಲೂ ಜನಪ್ರಿಯರಾಗಿದ್ದಾರೆ.
ನಿನ್ನೆ ಬೆಳಗ್ಗೆ ಕೇಂದ್ರ ಏಷ್ಯಾದ ಚಾಡ್ ದೇಶದ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿ ಟ್ವೀಟ್ ಮಾಡಿದ್ದ ಜೈಶಂಕರ್, ವಿದೇಶಾಂಗ ಇಲಾಖೆಯ ಹಲವು ಸಭೆಯಲ್ಲಿ ಪಾಲ್ಗೊಂಡಿದ್ದರು.














