
ಬೆಂಗಳೂರು: ಧರ್ಮಸ್ಥಳದ ಅನಾಮಿಕ ದೂರುದಾರನಾಗಿದ್ದ ಚಿನ್ನಯ್ಯ ಅವನ್ನು ಎಸ್‌ಐಟಿ ಪೊಲೀಸರು ಇಂದು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಹೇಳಿದ್ದಾರೆ
ನಿವಾಸದ ಬಳಿ ಮಾತನಾಡಿದ ಡಿಸಿಎಂ, ಈ ಪ್ರಕರಣದ ಬಗ್ಗೆ ಬಿಜೆಪಿಯವರು ಏನೂ ಮಾತಾಡಿರಲಿಲ್ಲ. ಬಿಜೆಪಿಯವರು ಅಡ್ಡಗೋಡೆ ಮೇಲೆ ದೀಪ ಇಡುವ ಕೆಲಸ ಮಾಡ್ತಿದ್ರು. ಷಡ್ಯಂತ್ರದ ಕುರಿತು ನಾನದನ್ನು ಪ್ರಸ್ತಾವನೆ ಮಾಡಿದ ಮೇಲೆ ಅವರು ಮಾತನಾಡಿದ್ದಾರೆ ಎಂದರು.
ಅಲ್ಲದೆ ಎಸ್‌ಐಟಿ ತನಿಖೆಯನ್ನು ಧರ್ಮಸ್ಥಳದ ಕುಟುಂಬದವರೇ ಸ್ವಾಗತ ಮಾಡಿದ್ದಾರೆ. ಸ್ವತಃ ಅವರ ಕುಟುಂಬದವರೇ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾರೆ. ಇನ್ನು ಇದನ್ನು ಅಧಿವೇಶನದಲ್ಲಿ ಬಾಲಕೃಷ್ಣ ಅವರು ಮಾತನಾಡಿದ್ದಾರೆ ಎಂದರು






