ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಇಂದು ದೂರುದಾರ ಮಾಸ್ಕ್ ಮ್ಯಾನ್ ಸಿ.ಎಸ್ ಚಿನ್ನಯ್ಯನನ್ನು ಬಂಧಿಸಿ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದೆ. ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ ಎಸ್ ಐ ಟಿ (SIT) ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಇದೀಗ ಕೋರ್ಟ್ ವಿಧಿಸಿ ಆದೇಶ ಹೊರಡಿಸಿದೆ.ನಿನ್ನೆಯಿಂದ ಇಂದಿನವರೆಗೆ ಸುದೀರ್ಘ ವಿಚಾರಣೆ ನಡೆಸಿದ ಎಸ್ ಐ ಟಿ ಪೊಲೀಸರು ಇಂದು ಮಾಸ್ಕ್ ಮ್ಯಾನ್ ನನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಪೊಲೀಸರ ಮನವಿ ಸ್ವೀಕರಿಸಿದ ಕೋರ್ಟ್ ಮಾಸ್ಕ್ ಚಿನ್ನಯ್ಯನನ್ನು 10 ದಿನ ಎಸ್ ಐ ಟಿ ವಶಕ್ಕೆ ನೀಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ನಾನು ಪಾತ್ರಧಾರಿ ಅಷ್ಟೇ , ಸೂತ್ರಧಾರಿಗಳು ಬೇರೆ ಇದ್ದಾರೆ

ನಾನು ಪಾತ್ರಧಾರಿ ಅಷ್ಟೇ , ಸೂತ್ರಧಾರಿಗಳು ಬೇರೆ ಇದ್ದಾರೆ. ಅವರು ಹೇಳಿದಂತೆಯೇ ನಾನು ಕೇಳಿದೆ. ಕೋರ್ಟ್ ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ಗೊತ್ತಿಲ್ಲ.. ಎಂದಿದ್ದಾನೆ. ಮಾಸ್ಕ್ ಹಾಕಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದ ಎಸ್ ಟಿ ಟಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ನಾನು ತೋರಿದ ಜಾಗದಲ್ಲಿ ಮಾತ್ರ ಶೋಧ ನಡೆಸಿ ಎಂದು ಚಿನ್ನಯ್ಯ ಪಟ್ಟು ಹಿಡಿದಿದ್ದನು. ಕೊನೆಗೆ ಅನುಮಾನಗೊಂಡು ಎಸ್ ಐ ಟಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.

Leave a Reply

Your email address will not be published. Required fields are marked *

Join WhatsApp Group
error: Content is protected !!