ಮಂಗಳೂರು (ಆ.30): ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ (ಉಲಾಯಿ ಪಿದಾಯಿ) ಜುಗಾರಿ ಆಟವಾಡುತ್ತಿದ್ದ 17 ಮಂದಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ, ದಿನಾಂಕ 30-08-2025 ರಂದು ರಾತ್ರಿ 11.30ರ ಹೊತ್ತಿಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀ ಶ್ರೀಕಾಂತ್ ಕೆ. ರವರ ನಿರ್ದೇಶನದಂತೆ, ಕಾವೂರು ಠಾಣಾ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ್ ಅವರ ನೇತೃತ್ವದಲ್ಲಿ ಪೊಲೀಸರು ಬೊಲ್ಪುಗುಡ್ಡೆ ಗ್ರಾಮದ ಮನೆಯಲ್ಲಿ ದಾಳಿ ನಡೆಸಿದರು.

ಕಾರ್ಯಾಚರಣೆಯಲ್ಲಿ ದಿಕ್ಷೀತ್ (31), ದಯಾನಂದ (40), ರಾಘವೇಂದ್ರ (41), ವೈಶಾಕ್ ಶೆಟ್ಟಿ (25), ಪ್ರವೀಣ್ ಕುಮಾರ್ (40), ಶಾಹುಲ್ ಹಮೀದ್ (50), ತಿಲಕ್ ರಾಜ್ (31), ಜಯಾನಂದ್ ಎಸ್ (44), ಉಮೇಶ್ (41), ಗೌತಮ್ (32), ಲಾರೆನ್ಸ್ ರಾಜಾ ಡಿ’ಸೋಜಾ (48), ಇನಸ್ ಡಿಸೋಜಾ, ಮುಹಮ್ಮದ್ ಅಶ್ರಫ್, ಮೊಹಮ್ಮದ್ ಫಯಾಜ್ (42), ಮುಸ್ತಾಫಾ (61), ಸುನೀಲ್ ಡಿಸೋಜಾ (41), ಕಣ್ಣನ್ (42, ತಮಿಳುನಾಡು) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಂದ ಒಟ್ಟು ₹1,92,000 ನಗದು ಹಾಗೂ 18 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ ಸುಮಾರು ₹4 ಲಕ್ಷವಾಗಿದೆ.

ಬಂಧಿತರು ಹಾಗೂ ಮನೆ ಮಾಲೀಕರ ವಿರುದ್ಧ ಕಾವೂರು ಠಾಣೆಯಲ್ಲಿ ಅ.ಕ್ರ. 129/2025 ಕಲಂ 78 ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು 112 ಭಾರತೀಯ ನ್ಯಾಯ ಸಂಹಿತೆ-2023ರಂತೆ ಪ್ರಕರಣ ದಾಖಲಾಗಿದೆ.

ಈ ದಾಳಿಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಠಾಣಾ ಸಿಬ್ಬಂದಿ ಎಎಸ್‌ಐ ಜಯರಾಮ್, ಮಂಜುನಾಥ, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.


Leave a Reply

Your email address will not be published. Required fields are marked *

Join WhatsApp Group
error: Content is protected !!