ಬಂಟ್ವಾಳ (ಆ.28): ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದವರ ಪರವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೂಲ ಮಾಹಿತಿ ಪ್ರಕಾರ, 13-06-2025 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಅ.ಕ್ರ. 68/2025ರಲ್ಲಿ ಉಮ್ಮರ್ ಫಾರೂಕ್‌ (ಬಂಟ್ವಾಳ ತಾಲೂಕು) ಎಂಬಾತನು ದೇರಾಜೆ ಬಳಿ ಇಬ್ಬರು ಅಪರಿಚಿತರು ಕೊಲೆ ಯತ್ನ ಮಾಡಿದ್ದಾರೆಂದು ದೂರು ನೀಡಿದ್ದ. ತನಿಖೆಯಲ್ಲಿ ಅದು ಸುಳ್ಳು ದೂರು ಎಂದು ಸ್ಪಷ್ಟವಾದ ಹಿನ್ನೆಲೆಯಲ್ಲಿ, ಉಮ್ಮರ್ ಫಾರೂಕ್ ವಿರುದ್ಧ 26-08-2025 ರಂದು ಠಾಣೆ ಅ.ಕ್ರ. 128/2025ರಲ್ಲಿ ಕಲಂ 192, 353(1)(ಬಿ), 230(1), 248(ಎ) ಬಿ.ಎನ್‌.ಎಸ್. ಕಾಯಿದೆಯಂತೆ ಪ್ರಕರಣ ದಾಖಲಿಸಲಾಯಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, 28-08-2025 ರಂದು “Ashaf Talapady” ಎಂಬ ಫೇಸ್ಬುಕ್ ಪೇಜ್‌ನಲ್ಲಿ ಯಾವುದೇ ಕಾನೂನುಬದ್ಧ ಆಧಾರವಿಲ್ಲದೆ ಉದ್ದೇಶಪೂರ್ವಕವಾಗಿ ಸುಳ್ಳು ಪ್ರಚಾರ ಮಾಡಿದ ಅಶ್ರಫ್ (ಬಂಟ್ವಾಳ ತಾಲೂಕು) ವಿರುದ್ಧವೂ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 130/2025ರಲ್ಲಿ ಕಲಂ 353(1)(B)(2), 192 BNS ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!