
ಪುತ್ತೂರು, ಸೆ.07: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕೊಡಿಪ್ಪಾಡಿ ಬ್ರಾಂಚ್ ಸಮಿತಿಯ ನೂತನ ಕಛೇರಿ ಕೊಡಿಪ್ಪಾಡಿ ಆನಾಜೆಯಲ್ಲಿ ಉದ್ಘಾಟಿಸಲಾಯಿತು. ಬ್ರಾಂಚ್ ಸಮಿತಿ ಅಧ್ಯಕ್ಷ ಫಾರೂಕ್ ಅರ್ಕ ಅವರು ಸಭೆಯನ್ನು ಅಧ್ಯಕ್ಷತೆ ವಹಿಸಿದರು.
ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಅವರು ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, “SDPI ಜನರ ಜೀವನದ ಪ್ರತಿಯೊಂದು ಹಂತಕ್ಕೂ ಸ್ಪಂದಿಸುವ ಪಕ್ಷವಾಗಿದೆ. ಫ್ಯಾಸಿಸ್ಟರ ವಿರೋಧದ ಹೋರಾಟವನ್ನು ನಮ್ಮ ಪಕ್ಷ ತೀವ್ರಗೊಳಿಸುತ್ತಲೇ ಇರುತ್ತದೆ” ಎಂದು ಹೇಳಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್ ಅವರು, “ಜನಸಾಮಾನ್ಯರ ಸಮಸ್ಯೆಗಳಿಗೆ ನಿಜವಾದ ಸ್ಪಂದನೆ ನೀಡುತ್ತಿರುವ ಏಕೈಕ ಪಕ್ಷ SDPI. ಹಸಿವು ಮತ್ತು ಭಯದಿಂದ ಮುಕ್ತ ಭಾರತವೆಂಬ ಘೋಷಣೆ ನಮ್ಮ ವಿರೋಧಿಗಳ ಕಣ್ಣು ಕುಕ್ಕುತ್ತಿದೆ” ಎಂದರು.
ಈ ಸಂದರ್ಭದಲ್ಲಿ ಹಲವು ಯುವಕರು ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು, ಕಬಕ ಬ್ಲಾಕ್ ಅಧ್ಯಕ್ಷ ಸಿದ್ದೀಕ್ ಉರಿಮಜಲು, ಕಾರ್ಯದರ್ಶಿ ಎಂ.ಎಚ್. ಸದ್ದಾಂ, ಕೊಡಿಪ್ಪಾಡಿ ಬ್ರಾಂಚ್ ಉಪಾಧ್ಯಕ್ಷ ರಹೀಂ ಆನಾಜೆ, ಕಾರ್ಯದರ್ಶಿ ಹಫೀಝ್ ಆನಾಜೆ, ಹಂಝ ಮದನಿ, ಅಬ್ದುಲ್ಲಾ ಮುಸ್ಲಿಯಾರ್, ಯೂಸುಫ್ ಮುರ, ಹಸೈನಾರ್ ಹಾಜಿ, ಹಮೀದ್ ಹಾಜಿ, ಹನೀಫ್ ಡೆಂಬೆಲೆ, ಅಬ್ದುಲ್ ರಹಿಮಾನ್ ಆನಾಜೆ, ಅಶ್ರಫ್ ಕಲೆಂಬಿ, ಮುರ ಪುತ್ತು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಬಕ ಬ್ಲಾಕ್ ಉಪಾಧ್ಯಕ್ಷ ಅದ್ದು ಕೊಡಿಪ್ಪಾಡಿ ಸ್ವಾಗತಿಸಿ ವಂದಿಸಿದರು. ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಝ್ ಬಳಕ್ಕ ಕಾರ್ಯಕ್ರಮವನ್ನು ನಿರೂಪಿಸಿದರು.






