ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಾಪ್ ಸಿಂಹ ಜತೆ ಹೊಸ ಪಕ್ಷ ಕಟ್ಟುವ ಸಾಧ್ಯತೆಯ ಕುರಿತು ನೀಡಿದ್ದ ಹೇಳಿಕೆಗೆ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

“ನನ್ನ ತಂದೆ ಜನಸಂಘದ ದೀಪದ ಚಿಹ್ನೆಯಿಂದ ಗೆದ್ದವರು. ಬಿ.ಬಿ. ಶಿವಪ್ಪ ಅವರ ಜತೆ ನಮ್ಮ ಕುಟುಂಬದ ನಿಷ್ಠೆ ಸಂಘಕ್ಕೂ, ಬಿಜೆಪಿಗೂ ಇದೆ. ನಾನು ಪತ್ರಕರ್ತನಾಗಿ ಪ್ರಾರಂಭಿಸಿ ಈಗ ಬಿಜೆಪಿ ಕಾರ್ಯಕರ್ತನಾಗಿದ್ದೇನೆ. ಯತ್ನಾಳ್ ಜತೆ ಸೇರಿ ಹೊಸ ಪಕ್ಷ ಕಟ್ಟುವ ಯೋಚನೆ ನನಗಿಲ್ಲ. ಅಧಿಕಾರ ಇರಲಿ ಇಲ್ಲದಿರಲಿ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ವಿಷಯವನ್ನು ನಾನು ಯತ್ನಾಳ್ ಅವರಿಗೂ ತಿಳಿಸಿದ್ದೇನೆ” ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!