
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2013ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅ.ಕ್ರ. ಸಂಖ್ಯೆ 140/2013ರಡಿ, ಭಾರತೀಯ ದಂಡ ಸಂಹಿತೆ ಸೆಕ್ಷನ್ 354(ಎ), (ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದ ಇಮ್ರಾನ್ ಖಾನ್ (36), ಶಿವಾಜಿನಗರ, ಬೆಂಗಳೂರು ನಿವಾಸಿ, ಇಷ್ಟು ವರ್ಷಗಳಿಂದ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು LPC ವಾರೆಂಟ್ ಸಂಖ್ಯೆ 1/2024ನ್ನು ಹೊರಡಿಸಿತ್ತು.
ಆರೋಪಿಯನ್ನು ಸೆಪ್ಟೆಂಬರ್ 13ರಂದು ಬೆಂಗಳೂರು ನಗರದ ಕೆ.ಜಿ.ಹಳ್ಳಿಯಿಂದ ಪೊಲೀಸರು ದಸ್ತಗಿರಿ ಮಾಡಿದ್ದು, ಸೆಪ್ಟೆಂಬರ್ 14ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಂತರ ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.









