ಪುತ್ತೂರು, ಸೆಪ್ಟೆಂಬರ್ 22: ಮೈಸೂರು ವಿಭಾಗ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟ ಶ್ರೀ ರಾಮಕುಂಜೇಶ್ವರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 27 ಮತ್ತು 28 ರಂದು ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದಂತೆ, ಸೆ.26 ಸಂಜೆ 5 ಗಂಟೆಗೆ ಮೊದಲ ತಂಡವನ್ನು ಕ್ರೀಡಾಂಗಣಕ್ಕೆ ಸ್ವಾಗತಿಸಲಾಗುವುದು. ಸೆ.27 ಬೆಳಿಗ್ಗೆ 9ಕ್ಕೆ ಆತೂರು ಸಿಎ ಬ್ಯಾಂಕ್ ಬಳಿಯಿಂದ ಮೆರವಣಿಗೆಯ ಮೂಲಕ ಉದ್ಘಾಟನೆ ನಡೆಯಲಿದೆ. 10 ಗಂಟೆಗೆ ಪ್ರವೇಶದ್ವಾರ, ಮಳಿಗೆಗಳು ಮತ್ತು ಸಭಾಂಗಣ ಉದ್ಘಾಟನೆ; 10.30ಕ್ಕೆ ಉದ್ಘಾಟನಾ ಸಮಾರಂಭ, 11.30ರಿಂದ ಕ್ರೀಡಾಂಗಣ ಉದ್ಘಾಟನೆ ಹಾಗೂ ಪಂದ್ಯಾಟಗಳ ಆರಂಭ ನಡೆಯಲಿದೆ.

ಸಂಜೆ 6ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಹಾಗೂ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ರಾತ್ರಿ 9.30ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಅರವಿಂದ್ ಬೋಳಾರ್, ಜೆ.ಪಿ. ತುಮಿನಾಡ್ ಮುಂತಾದವರು ಭಾಗಿಯಾಗಲಿದ್ದಾರೆ.

ಸೆ.28ರಂದು ಬೆಳಿಗ್ಗೆ 9ರಿಂದ ಬಾಲಕ-ಬಾಲಕಿ ಉಪಾಂತ್ಯ ಪಂದ್ಯಾಟಗಳು, ಮಧ್ಯಾಹ್ನ 12ರಿಂದ ಅಂತಿಮ ಪಂದ್ಯಾಟಗಳು ನಡೆಯುತ್ತವೆ. ಮಧ್ಯಾಹ್ನ 2ರಿಂದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ, ಸಂಜೆ 4ರಿಂದ ಹಾಸ್ಯ, ನೃತ್ಯ, ಸಂಗೀತ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ “ರಸಸಂಜೆ” ನಡೆಯಲಿದೆ.

ಸಂಯೋಜನ ಸಮಿತಿ ಸಂಚಾಲಕ ಕೇಶವ್ ಅಮೈ ಮಾತನಾಡಿ ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ, ಪ್ರದೀಪ ಬಾಕಿಲ ದ್ವಾರವನ್ನು ಹೇಮಲತಾ ಪ್ರದೀಪ್ ಬಾಕಿಲ ಉದ್ಘಾಟಿಸುವರು, ವಿಜ್ಞಾನಿ ಡಾ. ನೋಣಪ್ಪ ಫಿನ್‌ಲ್ಯಾಂಡ್‌ ಸಭಾಂಗಣ ಉದ್ಘಾಟನೆ; ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂ ಆಶೀರ್ವಚನ; ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ; ಶಾಸಕ ಅಶೋಕ್ ಕುಮಾರ್ ರೈ ಧ್ವಜಾರೋಹಣ. ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಚೇರ್ ಮೆನ್ ರಾಕೇಶ್ ಮಲ್ಲೀ, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮೊದಲಾದವರು ಮೊದಲಾದವರು ಅತಿಥಿಗಳಾಗಿರುವರು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷತೆಗಳು: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350 ವಿದ್ಯಾರ್ಥಿಗಳಿಂದ 3 ಗಂಟೆ ವೈಭವ. ಗುಜರಾತಿನ ಗಾರ್ಭ ನೃತ್ಯ, ದಾಂಡಿಯ, ಬಡಗುತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಪುರುಲಿಯಾ, ಮಲ್ಲಕಂಬ, ರೋಪ್ ಕಸರತ್ತು, ಡೊಳ್ಳು ಕುಣಿತ, ಸೃಜನಾತ್ಮಕ ಕಥಕ್ ನೃತ್ಯ, ಶಾಸ್ತ್ರೀಯ ನೃತ್ಯವನ್ನೂ ಪ್ರದರ್ಶನ ಮಾಡಲಾಗುವುದು.

ಮೇಳಗಳು ಮತ್ತು ವಿಶೇಷ ಪ್ರదర్శನಗಳು: ಕೃಷಿಮೇಳ, ವಾಣಿಜ್ಯ ಮೇಳ, ಶೈಕ್ಷಣಿಕ ಮೇಳ, ಸಾಂಸ್ಕೃತಿಕ ವೈವಿಧ್ಯ ಮತ್ತು ವಿಜ್ಞಾನ ಮೇಳಗಳು ಅಯೋಜನೆಗೊಂಡಿವೆ.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಆಯೋಜನಾ ಸಮಿತಿಯ ಪ್ರಮೋದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!