
ಕಡಬ: ಕಡಬ ತಾಲೂಕಿನ ಕಡಬ ಗ್ರಾಮದ ಪಿಜಕಳ ಪರಪ್ಪು ನಿವಾಸಿ ಜನಾರ್ದನ ನಾಯ್ಕ ಅವರ ಪುತ್ರ ವಿನೋದ್ ಪಿ.ಜೆ. (23) ಭಾನುವಾರ ರಾತ್ರಿ ಮೈಸೂರಿನಲ್ಲಿ ಹೃದಯಾಘಾತದಿಂದ ದುರ್ಮರಣ ಹೊಂದಿದ್ದಾರೆ.
ಮೈಸೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿನೋದ್ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಕಡಿಮೆಯಾಗಿತ್ತು. ಭಾನುವಾರ ರಾತ್ರಿ ತಮ್ಮ ರೂಮಿನಲ್ಲಿ ಊಟ ಮಾಡುತ್ತಿದ್ದ ವೇಳೆ ಅವರು ಅಚಾನಕ್ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲೇ ಮೃತಪಟ್ಟರು.
ಅವಿವಾಹಿತರಾಗಿದ್ದ ಮೃತ ವಿನೋದ್ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.






