
ಬನ್ನೂರು: ಸದಾ “ಸಮುದಾಯದ ಸೇವೆಗಾಗಿ” ಎಂಬ ಧ್ಯೇಯವಾಕ್ಯದೊಂದಿಗೆ 2017ರ ನವೆಂಬರ್ 1ರಂದು ಆರಂಭಗೊಂಡು 8 ವರ್ಷಗಳನ್ನು ಪೂರೈಸುತ್ತಿರುವ ಮುಸ್ಲಿಂ ಯೂತ್ ಫೆಡರೇಶನ್ (MYF) ಬನ್ನೂರು ಶಾಖೆಯ ಮಹಾಸಭೆ ಅಧ್ಯಕ್ಷ ಅಝರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ನೂತನ ಹುದ್ದೆಗಳನ್ನು ಪ್ರಕಟಿಸಲಾಯಿತು. ಇರ್ಫಾಝ್ ಅವರನ್ನು ಅಧ್ಯಕ್ಷರಾಗಿ, ಅಝರ್ ಅವರನ್ನು ಗೌರವ ಅಧ್ಯಕ್ಷರಾಗಿ, ಹಾರಿಸ್ ಪಿ ಕೆ ಅವರನ್ನು ಸಂಚಾಲಕರಾಗಿ, ಉಪಾಧ್ಯಕ್ಷರಾಗಿ ಇಮ್ತಿಯಾಝ್, ಅಬ್ದುಲ್ ಆಸಿಫ್ ಪಿ ಕೆ, ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿಯಾಗಿ ಆದಿಲ್, ಕಾರ್ಯದರ್ಶಿಗಳಾಗಿ ಅನೀಸ್, ತನ್ಸೀರ್, ಸೈಫುದ್ದೀನ್, ಸಂಘಟನಾ ಕಾರ್ಯದರ್ಶಿಯಾಗಿ ರಸೀಕ್, ಕೋಶಾಧಿಕಾರಿಯಾಗಿ ತಮೀಮ್, ಮೀಡಿಯಾ ಇಂಚಾರ್ಜ್‌ಗಳಾಗಿ ಹಾಫಿಲ್, ಇಮ್ರಾನ್ ಹಾಗೂ ಸಿಮಾಕ್ ಆಯ್ಕೆಯಾದರು.
ಅಲ್ಲದೆ ಮಯ್ಯತ್ ಪರಿಪಾಲನಾ ಉಸ್ತುವಾರಿಗಳಾಗಿ ಮುಸ್ತಫಾ, ರವೂಫ್ ಹಾಗೂ ಗೌರವ ಸಲಹೆಗಾರರಾಗಿ ರಫೀಕ್ ಬಾಂಬೆ, ಹನೀಫ್ 365, ಶರೀಫ್, ಪವಾಝ್ ಪಾಪ್ಲಿ ಮತ್ತು ಇರ್ಷಾದ್ ಇವರನ್ನು ನೇಮಕ ಮಾಡಲಾಯಿತು.






