
ಬೆಳ್ತಂಗಡಿ: ವಿವಿಧ ಗಂಭೀರ ಪ್ರಕರಣಗಳಲ್ಲಿ ನಿತ್ಯ ತೊಡಗಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಡಿಎಸ್ಪಿ ಬಂಟ್ವಾಳ ರವರು ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಪುತ್ತೂರು ಸಹಾಯಕ ಆಯುಕ್ತರು(ಎಸಿ) ರವರು ಗಡಿಪಾರು ಆದೇಶ ಹೊರಡಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ 1992ರಿಂದ 2025ರವರೆಗೆ ಒಟ್ಟು 21 ಪ್ರಕರಣಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇವುಗಳಲ್ಲಿ ಕೊಲೆ ಯತ್ನ, ದರೋಡೆ, ಹಲ್ಲೆ, ಧಾರ್ಮಿಕ ಭಾವನೆಗೆ ಧಕ್ಕೆ, ಅಶಾಂತಿ ಸೃಷ್ಟಿಸುವ ಪ್ರಕರಣಗಳು ಸೇರಿವೆ.
ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿಯೂ ಆರೋಪಿ ವಿರುದ್ಧ ಮತ್ತೆ 4 ಹೊಸ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಆಯುಧ ಕಾಯ್ದೆ 1959ರಡಿ ಪ್ರಕರಣವೂ ಸೇರಿದೆ.
ಇತ್ತೀಚೆಗೆ ಬ್ರಹ್ಮಾವರ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ಹೊರತುಪಡಿಸಿ ಉಳಿದ ಪ್ರಕರಣಗಳು ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿವೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ನಿರಂತರವಾಗಿ ಗಂಭೀರ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಡಿಎಸ್ಪಿ ಬಂಟ್ವಾಳ ರವರು ತುರ್ತು ಗಡಿಪಾರು ಪ್ರಕ್ರಿಯೆ ನಡೆಸುವಂತೆ ಪುತ್ತೂರು ಎಸಿಗೆ ಮನವಿ ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ಬಳಿಕ ಪುತ್ತೂರು ಸಹಾಯಕ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದಾರೆ.
*ಪತ್ರಿಕಾ ಪ್ರಕಟಣೆ*
ಈ ಕೆಳಗಿನ 21 ಪ್ರಕರಣಗಳಿಗೆ ಸಂಬಂದಿಸಿದಂತೆ ಡಿಎಸ್ಪಿ ಬಂಟ್ವಾಳ ರವರು ಗಡಿಪಾರು ಪ್ರಕ್ರಿಯೆಯನ್ನು ದಿನಾಂಕ 11-05-2025 ರಂದು ಪ್ರಾರಂಬಿಸಿರುವುದಾಗಿದೆ.
1. Belthangady Ps Cr.no.157/92 u/s 143, 147, 341, 506, 323,r/w 149 IPC
2. Belthangady Ps Cr.no.118/97 U/s 504, 324, 506 IPC
3. Belthangady Cr.no.201/97 U/s 341, 504, 324, 506 IPC
4. Belthangady Cr.no.73/98 u/s 160 IPC
5. Belthangady Cr.no 164/98 u/s 143,147,148,506,323,324,506, r/w 149 IPC
6. Belthangady Cr.no 155/01 u/s 504,323,324,506, r/w 34 IPC
7. Belthangady Cr.no.160/01 u/s 143, 147, 148, 153, 341, 506, 352 r/w 149 IPC
8. Belthangady PS Cr No 183/2003 U/s 143,341,323,504,354,506 R/w 149 IPC
9. Belthangady PS Cr No 52/2006 U/s143, 147, 148, 324 R/w 149 IPC & 2a, B KPDLP Act
10. Belthangady Cr.no 134/08 u/s 123,(3) RP Act 1951
11. Belthangady Cr.No. 255/2012 U/S.143, 147, 506, 353, R/W 149 IPC
12. Belthangady Cr.no. 364/2013 U/s 504, 323, 506 R/W 34 IPc
13. Belthangady Cr.no. 384/2013 u/s 143,147, 148, 504, 448, 323,324 153, 307, 395, R/W 149 IPc
14. Belthangady Cr.no. 32/2014 U/s 153, 153A, 295A, 298, 505 R/W.34 IPC
15. Belthangady PS Cr No 79/2014 U/s 507, IPC & 66(a) IT Act
16. Belthangady Cr.no 353/2014 U/s 120(a) 153, 211, 228(a), R/w 34 IPC & 66(a) IT Act
17 Belthangady Cr.no 408/2014 U/s 153, 153A, 295A, 228A IPC
18 Belthangady Cr.no 240/2015 U/s 143, 147, 341, 506, 307, 323, , 504 R/w 149 IPC
19 Belthangady Cr.no 106/2023 U/s 120, 153(b), 152(a), IPC
20 Belthangady Cr.no 14/2025 U/s 353(2) BNS
21 Belthangady Cr.no 31/2025 U/s 196, 197, 299 BNS
ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗ ದಾಖಲಾದ ಪ್ರಕರಣಗಳು
1.Belthangady Cr.no 75/2025 U/s 189(2), 191(1) (2), 115(2), 351(2), 352 R/w 190 BNS
2.Belthangady PS Cr No 77/2025 U/s 189(2), R/w 190(2) BNS
3.Belthangady PS Cr No 79/2025 U/s 353(2) BNS
4.Belthangady PS Cr No 108/2025 U/s: 25(1)(1-A) And 25(1)(1-B)(a) Arms Act 1959
ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರಕರಣ ಮತ್ತು ಆ ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಹೊರತುಪಡಿಸಿ ಮೇಲಿನ 4 ಪ್ರಕರಣಗಳು ದಾಖಲಾಗಿರುತ್ತದೆ.(Belthangady PS CR No 94/2025 U/s189(2),132,351(2),262,263(A), r/w 190 BNS 2023
Brahmavara PS CR No 177/2025 (U/s 196(1),352,353(2)) BNS 2023)
ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವ ಸಮಯ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಹೆಚ್ಚಿನ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ಡಿಎಸ್ಪಿ ಬಂಟ್ವಾಳ ರವರು ಸದರಿ ಗಡಿಪಾರು ಪ್ರಕ್ರಿಯೆಯನ್ನು ಅತೀ ಶೀಘ್ರವಾಗಿ ನಡೆಸಲು ಪುತ್ತೂರು ಸಹಾಯಕ ಆಯುಕ್ತರು(ಎಸಿ) ರವರಿಗೆ ಮನವಿ ಸಲ್ಲಿಸಿದ್ದು ಈ ಬಗ್ಗೆ ಪರಿಶೀಲಿಸಿ ಪುತ್ತೂರು ಸಹಾಯಕ ಆಯುಕ್ತರು ಗಡಿಪಾರು ಆದೇಶ ಹೊರಡಿಸಿರುವುದಾಗಿದೆ.






