
ಪುತ್ತೂರು, ಸೆ.26: ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ (ಮುಕ್ವೆ) ಹಾಗೂ ಮೆಡ್ ಲ್ಯಾಂಡ್ ಸ್ಪೆಷಲಿಟಿ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಸೆಪ್ಟೆಂಬರ್ 28, ಭಾನುವಾರ, ಮುಕ್ವೆ ಜಂಕ್ಷನ್‌ನ ಹೆವೆನ್ ರೆಸಿಡೆನ್ಸಿಯಲ್ಲಿ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ನಡೆಯಲಿದೆ.
ಶಿಬಿರದಲ್ಲಿ ಟೋಟಲ್ ಕೊಲೆಸ್ಟ್ರಾಲ್, TSH, GRBS, ECG, ಡಯಾಬಿಟಿಕ್ ಕಾಂಪ್ರೆಸರ್ ಸೇರಿದಂತೆ ಹಲವು ಲ್ಯಾಬ್ ಟೆಸ್ಟ್‌ಗಳನ್ನು ಉಚಿತವಾಗಿ ಮಾಡಲಾಗುವುದು. ಜೊತೆಗೆ ಜನರಲ್ ಫಿಸಿಷಿಯನ್, ಎಲುಬು ತಜ್ಞರು (Orthopedics), ಮಕ್ಕಳ ವೈದ್ಯರು (Pediatrician), ಫಿಸಿಯೋಥೆರಪಿಸ್ಟ್, ಹೃದಯ ತಜ್ಞರು (Cardiologist) ಸೇರಿದಂತೆ ವಿವಿಧ ತಜ್ಞ ವೈದ್ಯರ ಸಲಹೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಯ ಸೌಲಭ್ಯ ಲಭ್ಯವಿದೆ.
ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಮುಕ್ತವಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7349106856 | 98453 83245 08251-232355 ಅಥವಾ +91 7349106856 ಅನ್ನು ಸಂಪರ್ಕಿಸಬಹುದು.






