ಪುತ್ತೂರು: ವಿಜಯ ಸಾಮ್ರಾಟ್‌ ಪುತ್ತೂರು ವತಿಯಿಂದ ರಾಜ್ಯದ ಗಮನ ಸೆಳೆಯುವಂತಹ ‘ಪುತ್ತೂರುದ ಪಿಲಿಗೊಬ್ಬು-2025’ ಸೀಸನ್-3 ಹಾಗೂ ‘ಪುತ್ತೂರು ಪುಡ್ ಫೆಸ್ಟ್’ ಸೆಪ್ಟೆಂಬರ್‌ 27 ಮತ್ತು 28ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಸಂಸ್ಥಾಪಕಾಧ್ಯಕ್ಷ ಹಾಗೂ ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಮಾಹಿತಿ ನೀಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಲಿವೇಷ ಕುಣಿತ’ ತುಳುನಾಡಿನ ಧಾರ್ಮಿಕ ಹಿನ್ನೆಲೆಯ ಜನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪಿಲಿಗೊಬ್ಬು ಕಳೆದ ಎರಡು ವರ್ಷಗಳಿಂದ ಆಯೋಜಿಸಲಾಗುತ್ತಿದ್ದು, ಈ ಬಾರಿ ಮೂರನೇ ವರ್ಷದ ಭವ್ಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಪುಡ್ ಫೆಸ್ಟ್ ಸೆ. 27

ಸೆಪ್ಟೆಂಬರ್ 27 ಶನಿವಾರ ಸಂಜೆ 4 ಗಂಟೆಗೆ ಮುಳಿಯ ಜ್ಯುವೆಲ್ಲರ್ಸ್‌ನ ಆಡಳಿತ ನಿರ್ದೇಶಕ ಕೇಶವ್ ಪ್ರಸಾದ್ ಮುಳಿಯ ಫುಡ್ ಫೆಸ್ಟ್ ಉದ್ಘಾಟಿಸಲಿದ್ದಾರೆ. ಭಟ್ ಅಂಡ್ ಭಟ್ ಯೂಟ್ಯೂಬರ್ ಸುದರ್ಶನ ಭಟ್ ಬೆದ್ರಾಡಿ ಅವರು ಆಹಾರ ಮಳಿಗೆಗೆ ಚಾಲನೆ ನೀಡಲಿದ್ದಾರೆ.
ಆಹಾರ ಮೇಳವು ಶನಿವಾರ ಸಂಜೆ 4ರಿಂದ ರಾತ್ರಿ 11ರವರೆಗೆ ಹಾಗೂ ಸೆಪ್ಟೆಂಬರ್ 28ರಂದು ಬೆಳಿಗ್ಗೆ 10ರಿಂದ ರಾತ್ರಿ ತನಕ ನಡೆಯಲಿದೆ.

ಪಿಲಿಗೊಬ್ಬು ಸೆ. 28

ಸೆಪ್ಟೆಂಬರ್ 28 ಭಾನುವಾರ ಬೆಳಿಗ್ಗೆ 10.30ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳವರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಲಿದ್ದಾರೆ.
ಜಿಎಲ್ ಆಚಾರ್ಯ ಜುವೆಲರ್ಸ್‌ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಜಿ.ಎಲ್ ಅವರು ಪಿಲಿಗೊಬ್ಬು ಉದ್ಘಾಟಿಸಲಿದ್ದು, ವೇದಿಕೆಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೆರವೇರಿಸಲಿದ್ದಾರೆ.

ಬಹುಮಾನಗಳ ವೈಶಿಷ್ಟ್ಯ

ಜಿಲ್ಲೆಯ ಆಯ್ದ 8 ಹುಲಿವೇಷ ತಂಡಗಳು ಸ್ಪರ್ಧಿಸಲಿವೆ.

ಪ್ರಥಮ ಬಹುಮಾನ ರೂ. 3 ಲಕ್ಷ, ದ್ವಿತೀಯ 2 ಲಕ್ಷ, ತೃತೀಯ 1 ಲಕ್ಷ ರೂ. ನಗದು ಬಹುಮಾನ.

ಪಂದ್ಯಶ್ರೇಷ್ಠ ಪುತ್ತೂರುದ ಪಿಲಿಗೆ ಎಲ್‌ಇಡಿ ಟಿವಿ.

ಭಾಗಿಯಾದ ಪ್ರತೀ ತಂಡಕ್ಕೂ ಗೌರವ ಸಂಭಾವನೆ.

ವಿಶೇಷ ಪ್ರಶಸ್ತಿ ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿ, ಶಿಸ್ತಿನ ತಂಡ ಪ್ರಶಸ್ತಿ, ಗುಂಪು ಪ್ರಶಸ್ತಿ, ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದು ಮುಂತಾದ ವೈಯಕ್ತಿಕ ಪ್ರಶಸ್ತಿಗಳು ಲಭ್ಯ.

ಪ್ರತೀ ತಂಡದಲ್ಲಿ 15 ಜನರ ಪಾಲ್ಗೊಳ್ಳಿಕೆ, 23 ನಿಮಿಷದ ಪ್ರದರ್ಶನಾವಕಾಶ (20 ನಿಮಿಷ ನೃತ್ಯ + 1 ನಿಮಿಷ ಬ್ರೇಕ್ + 2 ನಿಮಿಷ).

ಜಿಲ್ಲೆಯ ಖ್ಯಾತ ತೀರ್ಪುಗಾರರು ನಿರ್ಣಾಯಕ ಮಂಡಳಿಯಲ್ಲಿ ಇರಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!