ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪೋರ್ಜರಿ ಸಹಿ ಪ್ರಕರಣದ ಕುರಿತು ಪತ್ರಕರ್ತರ ಪ್ರಶ್ನೆಗೆ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ಪಷ್ಟನೆ ನೀಡಿದರು.

ಅವರು ವಿವರಿಸಿದ್ದು ಹೀಗೆ: “ನಮ್ಮ ಕಚೇರಿಗೆ ಒಬ್ಬರು ಅರ್ಜಿ ಹಾಕಿದ್ದರು. ಅದು ಸುಮಾರು ಮೂರು ತಿಂಗಳು ಪೆಂಡಿಂಗ್ ಆಗಿ ಇತ್ತು. ನಾನು ವಾರಕ್ಕೆ ಒಂದು ದಿನ ಮಾತ್ರ ಕಚೇರಿಗೆ ಬರುತ್ತಿದ್ದೆ. ಈ ನಡುವೆ, ಒಂದು ದಿನ ಕಚೇರಿಗೆ ಬಂದು ನನ್ನ ಹೆಸರನ್ನು ಉಲ್ಲೇಖಿಸಿ ಸಿಬ್ಬಂದಿಗೆ ‘ಸರ್ ಪೈಲ್ ತರಲು ಹೇಳಿದ್ದಾರೆ’ ಎಂದು ಹೇಳಿ, ಟೈಪಿಸ್ಟ್ ಜೊತೆಗೂಡಿ ಟೈಪ್ ಮಾಡಿಸಿಕೊಂಡು ನನ್ನ ಸಹಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಕಟ್ಟಡ ಅನುಮೋದನೆಗೆ ಬಂದಾಗಲೇ ಇದು ಪೋರ್ಜರಿ ಸಹಿ ಎಂದು ತಿಳಿದು ತಕ್ಷಣ ಕ್ಯಾನ್ಸಲ್ ಮಾಡಿದ್ದೇನೆ” ಎಂದು ಹೇಳಿದರು.

“ಈ ಕುರಿತು ಪೊಲೀಸರಿಗೆ ದೂರು ನೀಡಲು ಯತ್ನಿಸಿದ್ದೆ. ಆದರೆ ದೂರು ನೀಡಿದರೆ ಕಚೇರಿಯ ನಿರಪರಾಧಿ ಸಿಬ್ಬಂದಿಗಳ ಮೇಲೂ ಪ್ರಕರಣ ದಾಖಲಾಗುವ ಸಾಧ್ಯತೆ ಇತ್ತು. ಅದಕ್ಕಾಗಿ ಮುಂದುವರಿಸಲಿಲ್ಲ. ಆದರೆ, ಪೋರ್ಜರಿ ಸಹಿ ಮಾಡಿಸಿದವರ ಕಟ್ಟಡ ಅನುಮೋದನೆ ಕಡತವನ್ನು ಕ್ಯಾನ್ಸಲ್ ಮಾಡಲಾಗಿದೆ” ಎಂದು ಗುರುಪ್ರಸಾದ್ ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!