ಬಂಟ್ವಾಳ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಪಾಲಾಸ್ತಡ್ಕದಲ್ಲಿರುವ ಪಿ.ಬಿ. ಇಂಡಸ್ಟ್ರೀಸ್ ಇಂಟರ್‌ ಲಾಕ್‌ ಘಟಕದಲ್ಲಿ ನಡೆದ ದಾಳಿ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿರ್ಯಾದಿದಾರರಾದ ಆನಂದಗೌಡರವರು ಪತ್ನಿಯ ಹೆಸರಿನಲ್ಲಿ ಈ ಘಟಕವನ್ನು ನಡೆಸುತ್ತಿದ್ದು, ಘಟಕದಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿತ್ತು. ಸೆಪ್ಟೆಂಬರ್ 28ರಂದು ಬೆಳಿಗ್ಗೆ ಘಟಕ ಪರಿಶೀಲನೆಗೆ ತೆರಳಿದ್ದ ಪಿರ್ಯಾದಿದಾರರು ಸಂಜೆ ಮರುಹೋದಾಗ, ಘಟಕದ ಬಾಗಿಲು ಮುರಿದು ಅಕ್ರಮ ಪ್ರವೇಶ ಮಾಡಲಾಗಿದ್ದು, ಅಳವಡಿಸಿದ್ದ ಎರಡು ಸಿಸಿ ಕ್ಯಾಮಾರಗಳನ್ನು ತುಂಡರಿಸಲಾಗಿತ್ತು. ಅಲ್ಲದೆ, ಸಿಸಿ ಕ್ಯಾಮರಾ ಡಿವಿಆರ್ ಹಾಗೂ ದೇವರ ಪೋಟೋವನ್ನು ನೆಲದ ಮೇಲೆ ಸುಟ್ಟು ಹಾಕಲಾಗಿರುವುದು ಪತ್ತೆಯಾಯಿತು.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 135/2025, ಕಲಂ 329(3), 326, 299 ಬಿ.ಎನ್.ಎಸ್ 2023ರಂತೆ ಪ್ರಕರಣ ದಾಖಲಾಗಿದೆ.

ಡಿವಿಆರ್ ಸುಟ್ಟುಹೋಗಿದ್ದರೂ ಮಾಲೀಕರ ಮೊಬೈಲ್‌ಗೆ ಸಿಸಿ ಕ್ಯಾಮರಾ ಸಂಪರ್ಕವಿರುವುದರಿಂದ ಕೃತ್ಯ ಎಸಗಿದ ಇಬ್ಬರು ಅಪ್ರಾಪ್ತ ಬಾಲಕರು ಪತ್ತೆಯಾಗಿದ್ದಾರೆ. ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿದಾಗ ಅವರು ತಪ್ಪು ಒಪ್ಪಿಕೊಂಡಿದ್ದು, ಅವರನ್ನು ಮಾನ್ಯ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!