ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ದಸರಾ ರಜೆಯನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಘೋಷಿಸಿದ್ದಾರೆ. ಇದರಂತೆ ಶಾಲೆಗಳು ಅಕ್ಟೋಬರ್ 18ರಿಂದ ಆರಂಭವಾಗಲಿದೆ.

ಮೂಲತಃ ನಾಳೆಯಿಂದಲೇ (ಅ.8) ತರಗತಿಗಳು ಪುನರಾರಂಭವಾಗಬೇಕಿದ್ದರೂ ಸರ್ಕಾರದ ಈ ನಿರ್ಧಾರದಿಂದ ಇನ್ನೂ ಹತ್ತು ದಿನಗಳ ಕಾಲ ಸರ್ಕಾರಿ ಶಾಲಾ ಮಕ್ಕಳಿಗೆ ರಜೆ ಸಿಗಲಿದೆ.

ಆದಾಗ್ಯೂ, ಖಾಸಗಿ ಮತ್ತು ಅನುದಾನರಹಿತ ಶಾಲೆಗಳಿಗೆ ಈ ರಜೆ ಅನ್ವಯವಾಗುವುದಿಲ್ಲ. ಹೆಚ್ಚಿನ ಖಾಸಗಿ ಶಾಲೆಗಳು ನಿಗದಿತ ವೇಳಾಪಟ್ಟಿಯಂತೆ ನಾಳೆಯಿಂದಲೇ ತರಗತಿಗಳನ್ನು ಆರಂಭಿಸುತ್ತವೆ.

ಅದರಂತೆ, ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ಸಮಾನವಾಗಿ ರಜೆ ವಿಸ್ತರಣೆ ಅನ್ವಯವಾಗುವುದಿಲ್ಲ ಎಂಬುದನ್ನು ಪಾಲಕರು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!