ಪುತ್ತೂರು:ಕರ್ನಾಟಕ ರಾಜ್ಯ ಸರಕಾರವು ಅನ್ನಭಾಗ್ಯ ಯೋಜನೆಯಡಿ “ಇಂದಿರಾ ಕಿಟ್” ವಿತರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು ಬಡ ಜನತೆಗೆ ನೆಮ್ಮದಿ ಮತ್ತು ಆಶಾದೀಪವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಶಾಸಕರು ಗುರುವಾರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದರು – “ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಹಾಗೂ ಅತಿ ಪ್ರಮಾಣದ ಅಕ್ಕಿ ವ್ಯರ್ಥವಾಗುತ್ತಿರುವ ವಿಚಾರ ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಅದನ್ನು 5 ಕೆ.ಜಿಗೆ ಇಳಿಸಿ, ಅದರ ಬದಲಿಗೆ ಉಪಯುಕ್ತ ವಸ್ತುಗಳನ್ನು ಒಳಗೊಂಡ ಇಂದಿರಾ ಕಿಟ್ ನೀಡಲು ತೀರ್ಮಾನಿಸಲಾಗಿದೆ. ಈ ಕ್ರಮ ಅತ್ಯುತ್ತಮ ಮತ್ತು ಜನಪರವಾಗಿದೆ” ಎಂದು ಹೇಳಿದರು.

ಇಂದಿರಾ ಕಿಟ್‌ನಲ್ಲಿ ದೊರೆಯುವ ವಸ್ತುಗಳು:
➡️ 2 ಕೆ.ಜಿ ತೊಗರಿ ಬೇಳೆ
➡️ 1 ಲೀಟರ್ ಅಡುಗೆ ಎಣ್ಣೆ
➡️ 1 ಕೆ.ಜಿ ಸಕ್ಕರೆ
➡️ 1 ಕೆ.ಜಿ ಉಪ್ಪು

ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಜನತೆಗೆ ಈ ಕಿಟ್ ಹೊಸ ಆಶಾದೀಪವನ್ನು ನೀಡಲಿದೆ ಎಂದು ಶಾಸಕ ಅಶೋಕ್ ರೈ ಅಭಿಪ್ರಾಯಪಟ್ಟರು. “ಇದು ಕರ್ನಾಟಕದ ಕಾಂಗ್ರೆಸ್ ಸರಕಾರದ ಬಡವರ ಪರವಾದ ನಿಜವಾದ ನಿಷ್ಠೆಯ ನಿದರ್ಶನವಾಗಿದೆ. ಕಾಂಗ್ರೆಸ್ ಎಂದೆಂದೂ ಬಡವರ ಪರ ನಿಂತ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ,” ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!