ಪುತ್ತೂರು:ರಥೋತ್ಸವ ಸಮಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಹೆಸರಿನಲ್ಲಿ ರಶೀದಿ ಮಾಡಿಸಿ, ಪೂಜೆ ಮಾಡಿಸಿ, ಪ್ರಸಾದ ತೆಗೆದುಕೊಂಡು ಹೋದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಶೀದಿಯ 25 ಸಾವಿರ ರೂಪಾಯಿ ಹಣವನ್ನು ದೇವಾಲಯಕ್ಕೆ ನೀಡದೇ ವಂಚನೆ ಮಾಡಿದ್ದಾರೆ ಎಂದು ಶಾಸಕ ಅಶೋಕ್ ರೈ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, “ಅಶೋಕ ಜನಮನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಮಳೆ ಬಂದ ಕಾರಣ ಸ್ವಲ್ಪ ಅಡಚಣೆ ಉಂಟಾಯಿತು, ಆದರೆ ನಿರೀಕ್ಷೆಗೂ ಮೀರಿ ಜನ ಸೇರ್ಪಡೆಯಾದರು. ಇದೇ ವಿಚಾರ ಮಠಂದೂರಿಗೆ ಅಸಹ್ಯವಾಗಿ, ಸುಳ್ಳು ಹೇಳಿಕೆಗಳ ಸರಮಾಲೆ ರಚಿಸಿದ್ದಾರೆ,” ಎಂದು ಹೇಳಿದರು.

ಮುಖ್ಯಮಂತ್ರಿಗಳು ರಾಜಕೀಯ ಮಾತುಗಳನ್ನಾಡಿಲ್ಲ, ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದ ಸಿದ್ದರಾಮಯ್ಯ ಅವರು ಜನರ ಸಭೆಯಲ್ಲಿ ಅದನ್ನು ವಿವರಿಸಿದ್ದಾರೆ. “ಸರಕಾರದ ಯೋಜನೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಹೇಳುವುದು ತಪ್ಪಲ್ಲ. ಮಠಂದೂರು ಅವರಿಗೆ ಅಷ್ಟು ತಿಳುವಳಿಕೆ ಇಲ್ಲದೆ ದೇವರಿಗೆ ವಂಚನೆ ಮಾಡಿದ ವಿಚಾರ ಮೊದಲು ಸ್ಪಷ್ಟಪಡಿಸಲಿ,” ಎಂದು ಅಶೋಕ್ ರೈ ಹೇಳಿದರು.

ಅವರು ಮುಂದುವರೆದು, “ಚುನಾವಣೆಯ ಸಮಯದಲ್ಲಿ ಕೋಮು ವಿಷ ಬಿತ್ತುವ ಮೂಲಕ ಅಧಿಕಾರಕ್ಕೇರಿದ ಬಿಜೆಪಿ ಅಭಿವೃದ್ದಿಗೆ ಬದ್ಧವಲ್ಲ. ಧರ್ಮಗಳ ನಡುವೆ ವೈಷಮ್ಯ ಉಂಟುಮಾಡಿ, ಬಡ ಯುವಕರನ್ನು ಜೈಲಿಗೆ ಕಳುಹಿಸುವ ಮೂಲಕ ಅವರ ಜೀವನ ಹಾಳುಮಾಡುತ್ತಿದೆ. ಇಂಥವರಿಗೆ ಸಿಎಂ ಬಗ್ಗೆ ಮಾತನಾಡುವ ಹಕ್ಕಿಲ್ಲ,” ಎಂದು ಆರೋಪಿಸಿದರು.

“ಗೆರಟೆ ಕೊಂಡು ಹೋಗಿದ್ದೆ, ದುಡ್ಡು ಕೊಟ್ಟಿದ್ದೇನೆ”
ದೇವಾಲಯದಿಂದ ಅಡುಗೆ ಬಳಕೆಗೆ ತೆಂಗಿನ ಗೆರಟೆ ಕೊಂಡು ಹೋಗಿದ್ದ ವಿಚಾರವನ್ನು ಸ್ಪಷ್ಟಪಡಿಸಿದ ಶಾಸಕರು, *“ದುಡ್ಡು ಕೊಡದೆ ಕೊಂಡ

Leave a Reply

Your email address will not be published. Required fields are marked *

Join WhatsApp Group
error: Content is protected !!