ಇಡೀ ಬೆಂಗಳೂರನ್ನೇ (Bengaluru) ಬೆಚ್ಚಿಬೀಳಿಸಿದ್ದ ಆಟೋದಲ್ಲಿ (Auto ) ಮಹಿಳೆ ಶವ ಪತ್ತೆ ಕೇಸ್ ಬೇಧಿಸುವಲ್ಲಿ ಬೆಂಗಳೂರು ಪೊಲೀಸರು (Police ) ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ತಿಲಕನಗರದಲ್ಲಿ ಮಹಿಳೆ ಸಲ್ಮಾ ಕೊಲೆ‌ ಪ್ರಕರಣ ಪೊಲೀಸರಿಗೆ ನಿಜಕ್ಕೂ ಸವಾಲಾಗಿತ್ತು.

ಇದೀಗ ಇಬ್ಬರು ಆರೋಪಿಗಳಿಂದ ಸಲ್ಮಾ ಕೊಲೆ ನಡೆದಿರೋ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹಂತಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಲ್ಮಾ ಪ್ರಿಯಕರ ಸುಬ್ರಹ್ಮಣಿ ಮತ್ತು ಸೆಂಥಿಲ್ ಎಂಬುವವರಿಂದ ಕೃತ್ಯನಡೆದಿದೆ. ಸಲ್ಮಾ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಸುಬ್ರಹ್ಮಣಿ ಆಕೆಯ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ಆಗಿತ್ತು. ಅಲ್ಲದೆ
ಸೆಂಥಿಲ್ ಜೊತೆಗೂ ಸಲ್ಮಾ ಸಲುಗೆಯಿಂದ ಇದ್ದಳು.ಇಬ್ಬರನ್ನು ಬಿಟ್ಟು ಬೇರೊಬ್ಬನ ಜೊತೆಗೆ ಸಂಬಂಧದ ಅನುಮಾನ ಮೂಡಿದ್ದರಿಂದ ಇಬ್ಬರೂ ಸೇರಿ ಸಲ್ಮಾ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತದೇಹ ಸಿಕ್ಕ 100 ಮೀಟರ್ ದೂರದಲ್ಲಿರುವ ಮನೆಯಲ್ಲಿ ಕೊಲೆ ಮಾಡಿ ಮಧ್ಯರಾತ್ರಿ ಮೃತದೇಹ ಸಾಗಾಟ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.ಕೊಲೆ ನಂತರ ಹೆಗಲ ಮೇಲೆ ಮೃತದೇಹ ಹೊತ್ತು ತಂದು ಕ್ರಿಮಿಗಳು ಆಟೋದಲ್ಲಿಟ್ಟಿದ್ದಾರೆ.
ರಾತ್ರಿ 1.30 ಸುಮಾರಿಗೆ ಮೃತದೇಹ ತಂದು ಆಟೋದಲ್ಲಿ‌ ಇಟ್ಟಿದ್ದೆವು ಎಂದು ಬಾಯಿಬಿಟ್ಟಿದ್ದಾರೆ.

ಸುಬ್ರಮಣಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದನು. ಮತ್ತೋರ್ವ ಆರೋಪಿ ಸೆಂಥಿಲ್ ಕೂಲಿ ಮಾಡ್ತಿದ್ದನು ಎಂದು ಗೊತ್ತಾಗಿದೆ. ಇಬ್ಬರನ್ನು ವಶಕ್ಕೆ ಪಡೆದಿರೋ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!