ಇತ್ತೀಚೆಗೆ ದೇಶದಲ್ಲಿ ಪತಿಯರ ಮೇಲೆ ಪತ್ನಿಯರ ದೌರ್ಜನ್ಯ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇದರ ಸಾಲಿನಲ್ಲಿ ಮತ್ತೊಂದು ಘಟನೆ ನಡೆದಿದೆ. ಎಷ್ಟೇ ಪೀಡಿಸಿದರೂ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಗಂಡನಿಗೆ ಪತ್ನಿ ವಿಷವಿಕ್ಕಿ (Poison) ಕೊಲ್ಲಲು ಯತ್ನಿಸಿದ ಶಾಕಿಂಗ್‌ ಘಟನೆ (Crime) ಉತ್ತರ ಪ್ರದೇಶದ (Uttar Pradesh) ಮುಜಾಫರ್ನಗರದಲ್ಲಿ (Muzaffarnagar)ನಡೆದಿದೆ.

ತನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ನಿರಂತರವಾಗಿ ನಿರಾಕರಿಸಿದ ಪತಿಯನ್ನು ಮಹಿಳೆಯೊಬ್ಬಳು ಕೊಲ್ಲಲು ಯತ್ನಿಸಿದ ಶಾಕಿಂಗ್‌ ಘಟನೆ ಮುಜಾಫರ್ನಗರದಲ್ಲಿ ನಡೆದಿದೆ. ಮಹಿಳೆ ಪಿಂಕಿ ತನ್ನ ಪತಿ ಅನುಜ್ ಶರ್ಮಾ ನನ್ನು ಕೊಲ್ಲಲು ಯತ್ನಿಸಿದ ಪಾಪಿ ಪತ್ನಿ.

ದಂಪತಿ 2023 ರಲ್ಲಿ ಮದುವೆಯಾಗಿದ್ದರು. ಆದರೆ ಅನುಜ್‌ಗೆ‌ ಪತ್ನಿಯೊಂದಿಗೆ ದೈಹಿಕ ಸಂಪರ್ಕದಲ್ಲಿ ಆಸಕ್ತಿ ಇರಲಿಲ್ಲ. ದಾಂಪತ್ಯ ಜೀವನದ ಎರಡು ವರ್ಷದಲ್ಲಿ ಇಬ್ಬರು ಕೇವಲ ಎರಡು ಬಾರಿ ಮಾತ್ರ ಸೇರಿದ್ದರು ಎಂದು ದೂರಲಾಗಿದೆ. ಆದರೂ ಮಹಿಳೆ ಪಿಂಕಿ ದೈಹಿಕ ಸಂಪರ್ಕಕ್ಕಾಗಿ ಅನುಜ್‌ನನ್ನು ಪದೇ ಪದೇ ಪೀಡಿಸುತ್ತಿದ್ದರು. ಆದರೆ ಇದಾವುದಕ್ಕೂ ಅನುಜ್‌ ಆಸಕ್ತಿ ತೋರುತ್ತಿರಲಿಲ್ಲ.

ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ಆತನಿಗೆ ವಿಷವಿಕ್ಕಿ ಕೊಲ್ಲಲು ಯತ್ನಿಸಿದ್ದಾಳೆ. ಅದೃಷ್ಟವಶಾತ್‌ ಅನುಜ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಕ್ಕ ಸಿಕ್ಕಲ್ಲಿ ತಿನ್ನುವ ಮುನ್ನ ಎಚ್ಚರ – ಸ್ಟ್ರೀಟ್ ಫುಡ್ ತಿಂದು ನಾಲ್ವರು ಸಾ*ವು.!

ರಜೆಯ ದಿನವನ್ನು ಕಳೆಯಲು ಟರ್ಕಿಗೆ ಹೋಗಿದ್ದ ಕುಟುಂಬವೊಂದು ಅಲ್ಲಿನ ಸ್ಟ್ರೀಟ್ ಫುಡ್ (Street Food) ಅನ್ನು ತಿಂದು ಸಾವನ್ನಪ್ಪಿರುವ (Shocking) ಘಟನೆ ಇಸ್ತಾನ್‌ಬುಲ್‌ನ (Istanbul) ಓರ್ಟಕೋಯ್ ಜಿಲ್ಲೆಯಲ್ಲಿ ಬಾಸ್ಫರಸ್ ಸೇತುವೆಯ ಬಳಿ ನಡೆದಿದೆ.

ಮೃತರನ್ನು ಸರ್ವೆಟ್ ಬೊಸೆಕ್, ಸಿಗ್ಡೆಮ್ ಬೊಸೆಕ್, ಮಕ್ಕಳಾದ ಕದಿರ್ (6) ಹಾಗೂ ಮಸಾಲ್ (3) ಎಂದು ಗುರುತಿಸಲಾಗಿದೆ. ರಜೆಯ ಹಿನ್ನಲೆ ಈ ಕುಟುಂಬ ನವೆಂಬರ್ 9 ರಂದು ಜರ್ಮನಿಯ ಹ್ಯಾಂಬರ್ಗ್‌ನಿಂದ ಟರ್ಕಿಯ ಇಸ್ತಾನ್‌ಬುಲ್‌ಗೆ ಪ್ರಯಾಣ ಬೆಳೆಸಿತ್ತು.

ಈ ವೇಳೆ ಇಸ್ತಾನ್‌ಬುಲ್‌ನ ಓರ್ಟಕೋಯ್ ಜಿಲ್ಲೆಯಲ್ಲಿ ಬಾಸ್ಫರಸ್ ಸೇತುವೆಯ ಬಳಿ ಇರುವ ಸ್ಟ್ರೀಟ್ನಲ್ಲಿ ಅನ್ನ, ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಕುರಿ ಮರಿಗಳ ಕರುಳಿನ ಖಾದ್ಯವನ್ನು ಸೇವಿಸಿದ್ದರು ಎನ್ನಲಾಗಿದೆ.

ಇದನ್ನೂ ತಿಂದು ಕೆಲವೇ ನಿಮಿಷದಲ್ಲಿ ಮಕ್ಕಳಿಗೆ ವಾಂತಿ ಶುರುವಾಯಿತು, ಇದಾಗಿ ಕೆಲವೇ ಸೆಕೆಂಡ್ ಗಳಲ್ಲಿ ಪೋಷಕರ ಆರೋಗ್ಯ ಕೂಡ ಹದಗೇಡಲು ಆರಂಭಿಸಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ 6 ವರ್ಷದ ಕದಿರ್ ಮತ್ತು 3 ವರ್ಷದ ಮಸಾಲ್ ಮಕ್ಕಳು ಸಾವನ್ನಪ್ಪಿದ್ದರೆ, ಮಾರನೇ ದಿನ ತಾಯಿ ಸಿಗ್ಡೆಮ್ ಬೊಸೆಕ್ ಕೂಡ ಮೃತಪಟ್ಟಿದ್ದಾರೆ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ತಂದೆ ಸರ್ವೆಟ್ ಬೊಸೆಕ್ ಕೂಡ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!