ಪುತ್ತೂರು: 2025 ಡಿಸೆಂಬರ್ 31ರಿಂದ 2026ರ ಜನವರಿ 4ರವರೆಗೆ ನಡೆಯಲಿರುವ ಸಾಲ್ಮರ ಸೈಯದ್ ಮಲೆ ಮಖಾಂ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಸಾಲ್ಮರ ಸೈಯದ್ ಮಲೆ ಮಸೀದಿಯ ಸಭಾಂಗಣದಲ್ಲಿ ಜರುಗಿತು.

ಅಂತ್ಯ ವಿಶ್ರಾಂತಿ ಹೊಂದಿರುವ ಸಯ್ಯದ್ ಅಬ್ದುಲ್ ಸಲಾಂ ತಂಬಳ್ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್.ಎಂ. ತಂಬಳ್ ಸಾಲ್ವರ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ನಾಟಿ ವೈದ್ಯ ಸಂಶುದ್ದೀನ್ ಸಾಲ್ಕರ್ ವಹಿಸಿದ್ದರು. ಉರೂಸ್ ಸಮಾರಂಭ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಖತೀಬ್ ಉಮರ್ ದಾರಿಮಿ ಸಾಲ್ಮರ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ನೂರುದ್ದೀನ್ ಸಾಲ್ಮರ, ಯೂಸುಫ್ ತಾರಿಗುಡ್ಡೆ, ತಾಜುದ್ದೀನ್ ಸಾಲ್ಮರ, ಇಲ್ಯಾಸ್ ಸಾಲ್ಮರ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಸಾಲ್ಮರ, ಬಶೀರ್ ಜನತಾ, ಲತೀಫ್ ರೈಲ್ವೆ, ಉಸ್ಮಾನ್ ಕೆರೆಮೂಲೆ, ರಝಾಕ್ ಕೆರೆಮೂಲೆ, ಹೈದರ್ ಇರ್ಫಾನಿ, ಉಮ್ಮರ್ ಫೈಝಿ ಸಾಲ್ಮರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!