ಪುತ್ತೂರು: ಪುತ್ತೂರುನಗರಸಭಾ ವ್ಯಾಪ್ತಿಯಲ್ಲಿ‌ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಹೊಂಡಗಳ ಸೃಷ್ಟಿಯಾಗಿದ್ದು ಅವುಗಳನ್ನು‌ಮುಚ್ಚುವಂತೆ ಕಳೆದ ಒಂದು ವಾರದ ಹಿಂದೆ ಶಾಸಕ ಅಶೋಕ್ ರೈ ಅವರು ನಗರಸಭಾ ಕಮಿಷನರ್ ಗೆ ಸೂಚನೆ ನೀಡಿದ್ದರು. ವಾರ ಕಳೆದರೂ ಇನ್ನೂ ಗುಂಡಿ‌ಮುಚ್ಚದೇ ಇರುವುದನ್ನು ಕಂಡು‌ಆಕ್ರೋಶಗೊಂಡ ಶಾಸಕರು‌ಕಮಿಷನರ್‌ಅವರನ್ನು ತರಾಟೆಗೆ ಎತ್ತಿಕೊಂಡಿದ್ದಾರೆ.
ಪುತ್ತೂರು‌ನಗರದ ದರ್ಬೆ,ಕಲ್ಲಾರೆ, ಬೊಳುವಾರು,ಪರ್ಲಡ್ಕ ಸೇರಿದಂತೆ ಕೆಲವು ಕಡೆಗಳಲ್ಲಿ‌ ರಸ್ತೆ ಹೊಂಡ ಬಿದ್ದಿದ್ದವು. ಮಳೆ ಇರುವ ಕಾರಣ ಪ್ಯಾಚ್ ವರ್ಕ್‌ಕಾಮಗಾರಿ ನಡೆಸಲು‌ಸಾಧ್ಯವಾಗಿರಲಿಲ್ಲ.‌ ಮಳೆ ಮುಗಿದ ತಕ್ಷಣ ಹೊಂಡ ಮುಚ್ಚುವಂತೆ ಶಾಸಕರು ಸೂಚನೆಯನ್ನು ನೀಡಿದ್ದರು. ಕಳೆದ‌ಒಂದು ವಾರದ ಹಿಂದೆ ಗಡುವನ್ನು ನೀಡಿದ್ದರು. ಆದರೆ ಕಮಿಷನರ್‌ಅವರು ಶಾಸಕರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದನ್ನು ನೋಡಿ‌ಸಿಟ್ಟಾದ ಶಾಸಕರು ತರಾಟೆಗೆ ಎತ್ತಿಕೊಂಡರು.

ನಾಳೆ ಲಾಸ್ಟ್ ಗಡು…!!
ಡಿ.1 ಸೋಮವಾರ ಹೊಂಡ ಮುಚ್ಚುವ ಕೆಲಸ ಆರಂಭ‌ಮಾಡಬೇಕು.‌ಇನ್ನು ಹೇಳುವುದಿಲ್ಲ ,ಏನು‌ಮಾಡ ಬೇಕೆಂದು ನನಗೆ ಗೊತ್ತಿದೆ ಎಂದು ಆಕ್ರೋಶದಿಂದ ಮಾತನಾಡಿದ ಶಾಸಕರು ನಾಳೆ ಯ ಗಡುವು ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!