
ಪುತ್ತೂರು: ಸಂಪ್ಯದ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ಘಟಕ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಉದ್ಘಾಟನೆ ಡಿ.1 ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಕಾರ್ಯಕ್ರಮಕ್ಕೆ ಜನರಲ್ ಫಿಸಿಶಿಯನ್ ಮತ್ತು ಮಧುಮೇಹ ತಜ್ಞರು ಡಾ. ಸ್ವಾತಿ ಪಿ. ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಹಾಗೂ ತುಳು ಚಿತ್ರ ನಟಿ ಕು. ಚಿರಶ್ರೀ ಅಂಚನ್ ಉದ್ಘಾಟನಾ ನೆರವೇರಿಸಲಿದ್ದಾರೆ. ಎನ್‌ಐಸಿಯು ಘಟಕವನ್ನು ಮಕ್ಕಳ ತಜ್ಞರು ಡಾ. ತನ್ವಿ ಸುರೇಂದ್ರ ಪೈ ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಮೆಡಿಕಲ್ ಡೈರೆಕ್ಟರ್ ಡಾ. ವಿಶಾಲ್ ಯು.ಪಿ., ಮೆಡ್‌ಲ್ಯಾಂಡ್ ಆಸ್ಪತ್ರೆಯ ಚೇರ್‌ಮನ್ ಡಾ. ಅಶ್ರಫ್ ಕಮ್ಮಾಡಿ ಉಪಸ್ಥಿತರಿರಲಿದ್ದಾರೆ.
ಅತಿಥಿಗಳಾಗಿ ಡಾ. ಶ್ರೀಲತ ಭಟ್, ಗ್ರಾ.ಪಂ ಅಧ್ಯಕ್ಷೆ ಗೀತಾ, ನೆಟ್ಟಣಿಗೆ ಮುನ್ನೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯಾ, ಪುತ್ತೂರು ನಗರಸಭೆಯ ಮಾಜಿ ಸದಸ್ಯರು ಶೈಲಾ ಪೈ ಹಾಗೂ ಫಾತಿಮತ್ ಝೂಹರ, ಆರ್ಯಾಪು ಗ್ರಾ.ಪಂ ಸದಸ್ಯೆ ರಶೀದಾ ಬಿ. ಮೊದಲಾದವರು ಭಾಗವಹಿಸಲಿದ್ದಾರೆ.
ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ತಜ್ಞೆಯಾದ ಡಾ. ಆಸಿಯಾ ಆಫ್ರಾ ಇಸ್ಮಾಯಿಲ್ ಅವರು ಸಂದರ್ಶನಕ್ಕೆ ಲಭ್ಯವಿರುವುದಾಗಿ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ಮೀರ್ ಕಮ್ಮಾಡಿ ತಿಳಿಸಿದ್ದಾರೆ.






