
ಪುತ್ತೂರು, ಡಿ.10— ಪುತ್ತೂರು ತಾಲೂಕಿನ ಬೆಳ್ಳಿಪಾಡಿ ನೇಲಡ್ಕದಲ್ಲಿರುವ ಗಂಗಯ್ಯ ಗೌಡರ ಮನೆಯಲ್ಲಿ ಡಿ.11 ರಂದು ಕಟೀಲು ಈ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ‘ಕಟೀಲು ಶ್ರೀದೇವಿ ಮಹಾತ್ಮ’ ಯಕ್ಷಗಾನ ಬಯಲಾಟ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 6 ಗಂಟೆಗೆ ಚೌಕಿ ಪೂಜೆ ನೆರವೇರಲಿದೆ. ಬಳಿಕ ರಾತ್ರಿ 8 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆಯೂ ಇರಲಿದೆ ಎಂದು ಯಮುನಾ, ಗಂಗಯ್ಯ ಗೌಡ ಹಾಗೂ ಕುಟುಂಬದವರು ತಿಳಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






