
ಪುತ್ತೂರು:ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾದ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನವು ಕಾಸರಗೋಡು ಕುನಿಯ ಎಂಬಲ್ಲಿ 2026 ಫೆಬ್ರವರಿ ತಿಂಗಳ 4-8 ದಿನಾಂಕ ಗಳಲ್ಲಿ ನಡೆಯಲಿದೆ.ಇದರ ಪ್ರಚಾರಾರ್ಥ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಮಂಗಳೂರು ತನಕ ಸಮಸ್ತ ಶತಾಬ್ದಿ ಸಂದೇಶ ಜಾಥಾ ನಡೆಯಲಿದ್ದು,ಅದರ ಸಮಾರೋಪ ಸಮಾರಂಭ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿದೆ.ಈ ಎರಡೂ ಐತಿಹಾಸಿಕ ಮಹಾ ಸಮ್ಮೇಳನಗಳ ಪ್ರಚಾರಾರ್ಥ ಪುತ್ತೂರು ತಾಲೂಕು ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾ ವತಿಯಿಂದ ಉಲಮಾ ಉಮರಾ ಸಂಗಮ ಹಾಗೂ ಸಮಸ್ತ ಆದರ್ಶ ಮಹಾ ಸಮ್ಮೇಳನವು ಪುತ್ತೂರು ಬದ್ರಿಯಾ ಮಸೀದಿ ವಠಾರದಲ್ಲಿ ಡಿಸೆಂಬರ್ 14 ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಡೆಯಲಿದೆ ಎಂದು ಸಮಸ್ತ ಕೇರಳ ಜಂ ಇಯ್ಯತ್ತುಲ್ ಖುತಬಾ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಮರ್ಹೂಂ ಶೈಖುನಾ ತೊಟ್ಟಿ ಉಸ್ತಾದ್ ವೇದಿಕೆಯಲ್ಲಿ ಉಲಮಾ- ಉಮರಾ ಸಂಗಮ ನಡೆಯಲಿದ್ದು,ಅಹ್ಮದ್ ಪೂಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ತೋಡಾರು ಉದ್ಘಾಟನೆ ಮಾಡಲಿದ್ದು ‘ಮೊಹಲ್ಲಾ ಸಬಲೀಕರಣ’ ಎಂಬ ವಿಷಯದಲ್ಲಿ ಖ್ಯಾತ ಯುವ ವಿದ್ವಾಂಸ ಸುಹೈಲ್ ದಾರಿಮಿ ಅಲ್ ಹೈತಮಿ ಪಳ್ಳಿಕ್ಕರ ವಿಷಯ ಮಂಡಿಸಲಿದ್ದಾರೆ.ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಆದರ್ಶ ಮಹಾ ಸಮ್ಮೇಳನವು ಮರ್ಹೂಂ ಪುತ್ತೂರು ತಂಙಳ್ ವೇದಿಕೆಯಲ್ಲಿ ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು,ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ಉಸ್ತಾದ್ ಉದ್ಘಾಟನೆಗೈಯ್ಯಲಿದ್ದಾರೆ.ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ನಾಯಕ,ಯುವ ವಾಗ್ಮಿ ಸತ್ತಾರ್ ಪಂದಲ್ಲೂರ್ ಮುಖ್ಯ ಭಾಷಣ ಮಾಡಲಿದ್ದಾರೆ.ಸಮ್ಮೇಳನದಲ್ಲಿ ಸಮಸ್ತದ ಜಿಲ್ಲಾ ನಾಯಕರು, ಜಂ ಇಯ್ಯತ್ತುಲ್ ಮುದರ್ರಿಸೀನ್ ,ಜಂ ಇಯ್ಯತ್ತುಲ್ ಖುತಬಾ,ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ನಾಯಕರು,ವಲಯ ಮಟ್ಟದ ನಾಯಕರು, ಸಮಸ್ತ ಮದ್ರಸಾ ಮೇನೇಜ್ಮೆಂಟ್ ಅಸೋಸಿಯೇಷನ್ ಪದಾಧಿಕಾರಿಗಳು, ಸುಮಾರು ನೂರರಷ್ಟು ಮೊಹಲ್ಲಾದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ,ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾ ಪುತ್ತೂರು ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಉಮರ್ ದಾರಿಮಿ ಸಾಲ್ಮರ,ಜಂ ಇಯ್ಯತ್ತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಪಮ್ಮಲೆ,ಎಸ್ ಕೆ ಎಸ್ ಎಸ್ ಎಫ್ ಪುತ್ತೂರು ವಲಯಾಧ್ಯಕ್ಷ
ಬಾತಿಷಾ ಹಾಜಿ ಪಾಟ್ರಕೋಡಿ ಉಪಸ್ಥಿತರಿದ್ದರು.






