ಮತ್ತೂರು: ಮತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಡಿಸೆಂಬರ್ 15ರಿಂದ ಜನವರಿ 15ರವರೆಗೆ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’ ಅನ್ನು ಆಯೋಜಿಸಲಾಗಿದೆ.

ಈ ಮಹೋತ್ಸವದ ಅಂಗವಾಗಿ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ.7,000ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವಜ್ರಾಭರಣಗಳು ದುಬಾರಿಯೇ ಎಂಬ ಸಾಮಾನ್ಯ ಭಾವನೆಗೆ ಸವಾಲು ಹಾಕುವಂತೆ, ರೂ.3,500ರಿಂದಲೇ ವಜ್ರಾಭರಣಗಳು ಲಭ್ಯವಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟಕುವ ದರದಲ್ಲಿ ಖರೀದಿ ಅವಕಾಶ ಕಲ್ಪಿಸಲಾಗಿದೆ.

ಅಂತರಾಷ್ಟ್ರೀಯ ಪ್ರಯೋಗಾಲಯಗಳಿಂದ ಪ್ರಮಾಣೀಕರಿಸಲ್ಪಟ್ಟ ಉತ್ಕೃಷ್ಟ ಗುಣಮಟ್ಟದ ಗ್ಲೋ ವಜ್ರಾಭರಣಗಳ ಸಂಗ್ರಹದಲ್ಲಿ ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ, ನೆಕ್ಸಸ್ ಹಾಗೂ ಬಳೆಗಳ ವಿವಿಧ ಆಕರ್ಷಕ ವಿನ್ಯಾಸಗಳು ಲಭ್ಯವಿವೆ. ನುರಿತ ತಜ್ಞರಿಂದ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದರೊಂದಿಗೆ, ಪ್ರತಿಷ್ಠಿತ ಏಜೆನ್ಸಿಗಳಿಂದ ಪ್ರಮಾಣೀಕರಿಸಲ್ಪಟ್ಟ ವಜ್ರಾಭರಣಗಳ ಶ್ರೇಣಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ಪ್ರಮಾಣೀಕೃತ EF ಬಣ್ಣದ ಹಳೆಯ ವಜ್ರಾಭರಣಗಳ ವಿನಿಮಯ ಹಾಗೂ ಮರುಖರೀದಿಯ ಗ್ಯಾರಂಟಿಯ ಜೊತೆಗೆ, ಅಚ್ಚರಿಯ ಕೊಡುಗೆಗಳು ಮತ್ತು ಉಡುಗೊರೆಗಳನ್ನು ಪಡೆಯುವ ಅವಕಾಶವೂ ಈ ಮಹೋತ್ಸವದಲ್ಲಿ ಲಭ್ಯವಿದೆ.

ಸುಮಾರು 3,600ಕ್ಕೂ ಹೆಚ್ಚು ವಿನ್ಯಾಸಗಳ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ವಿವಿಧ ಆಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಆಭರಣಗಳು ಲಭ್ಯವಿವೆ. ಗ್ರಾಹಕರಿಗೆ ಆಹ್ಲಾದಕರ ಹಾಗೂ ವಿಶ್ವಾಸಾರ್ಹ ಖರೀದಿ ಅನುಭವ ಕಲ್ಪಿಸುವ ಉದ್ದೇಶದಿಂದ ಮಳಿಗೆಯನ್ನು ಸಜ್ಜುಗೊಳಿಸಲಾಗಿದೆ.

ಆಧುನಿಕ ಹಾಗೂ ಪಾರಂಪರಿಕ ಚಿನ್ನಾಭರಣಗಳು, ವಜ್ರಾಭರಣಗಳು ಮತ್ತು ಗುಣಮಟ್ಟದ ಆಭರಣಗಳ ಮಾರಾಟದಲ್ಲಿ ಹೆಸರು ಪಡೆದಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ಗೆ ಸುಳ್ಯ, ಮೂಡಬಿದ್ರೆ, ಹಾಸನ ಮತ್ತು ಕುಶಾಲನಗರದಲ್ಲೂ ಶಾಖೆಗಳಿದ್ದು, ‘ಗ್ಲೋ ಫೆಸ್ಟ್’ ಆಫರ್ ಎಲ್ಲಾ ಮಳಿಗೆಗಳಲ್ಲೂ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!