ಎರಡು ಬಾರಿ ಪಿಎಸ್ ಐ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಅಭ್ಯರ್ಥಿಯೊಬ್ಬ ತನ್ನ ಸಹಚರರೊಂದಿಗೆ ಸೇರಿ ತಾನು ಪೊಲೀಸ್ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ವಿದ್ಯಾರಣ್ಯಪುರ ಠಾಣೆ ಪೊಲೀಸರು ನಕಲಿ ಪಿಎಸ್ ಐ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಮಲ್ಲಿಕಾರ್ಜುನ, ಪ್ರಮೋದ್, ವಿನಯ್, ಹೃತ್ವಿಕ್ ಬಂಧಿತ ಆರೋಪಿಗಳು. ಆರ್ಪಿ ಮಲ್ಲಿಕಾರ್ಜುನ ಎರಡು ಬಾರಿ ಪಿಎಸ್ ಐ ಪರೀಕ್ಷೆ ಬರೆದು ಫೇಲ್ ಆಗಿದ್ದ. ಊರಲ್ಲಿ ತಾನು ಪಿಎಸ್ ಐ ಆಗಿರುವುದಾಗಿ ಸುಳ್ಳು ಹೇಳಿ ಬಿಲ್ಡಪ್ ತೆಗೆದುಕೊಂಡಿದ್ದ.

ಪೊಲೀಸ್ ಯೂನಿರ್ಫಾರ್ಮ್, ಲಾಠಿ, ಶೂ, ಕ್ಯಾಪ್ ಧರಿಸಿ ಫೋಟೋ ಶೂಟ್ ಮಾಡಿಸಿದ್ದ. ತನ್ನ ಊರು ಸಿರಗುಪ್ಪದಲ್ಲಿ ತಾನು ಬೆಂಗಳೂರಿನಲ್ಲಿ ಪಿಎಸ್ ಐ ಎಂದು ನಂಬಿಸಿದ್ದಾನೆ. ಬೆಂಗಳೂರಿನಲ್ಲಿ ನಕಲಿ ಪೊಲೀಸ್ ಆಗಿ ಬೆದರಿಕೆ ಹಾಕಿ ಹಲವರಿಂದ ಹಣ ವಸೂಲಿ ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದ. ನವೀನ್ ಎಂಬಾತನ ಮನೆಗೆ ನುಗ್ಗಿದರೆ ಹಣ, ಚಿನ್ನಾಭರಣ ಸಿಗುತ್ತದೆ ಎಂದು ಹೃತ್ವಿಕ್ ಹೇಳಿದ್ದ ಅದರಂತೆ ಪಕ್ಕಾ ಪ್ಲಾನ್ ಮಾಡಿ ಪೊಲೀಸ್ ಡ್ರೆಸ್ ನಲ್ಲಿ ಮಲ್ಲಿಕಾರ್ಜುನ ನವೀನ್ ಮನೆಗೆ ಪೊಲೀಸರೆಂದು ಕಾರಿನಲ್ಲಿ ಎಂಟ್ರಿಕೊಟ್ಟಿದ್ದರು.

ನೀನು ಗಾಂಜಾ ಮಾರುತ್ತಿದ್ದೀಯಾ. ನಿನ್ನ ಮೇಲೆ ಕೇಸ್ ದಾಖಲಾಗಿದೆ ಮನೆಯಲ್ಲಿ ಸರ್ಚ್ ಮಾಡಬೇಕು ಎಂದು ಬೆದರಿಸಿದ್ದರು. ಲಾಠಿ, ದೊಣ್ಣೆಯಿಂದ ಹೊಡೆದಿದ್ದರು. ಪ್ರಕರಣ ದಾಕಹ್ಲಾಗಬಾರದ್ ಎನ್ನುವುದಾದರೆ ಹಣ ಕೊಡಬೇಕು ಎಂದು ಆತನಿಂದ 87 ಸಾವಿರ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದರು. ಮನೆಯಲ್ಲಿದ್ದ 53 ಸಾವಿರ ಹಾಗೂ ಪರ್ಸ್ ನಲ್ಲಿದ್ದ 2 ಸಾವಿರ ಹಣವನ್ನೂ ಎಗರಿಸಿ ಪರಾರಿಯಾಗಿದ್ದರು. ಅನುಮಾನಗೊಂಡ ನವೀನ್ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದರು. ಈ ವೇಳೆ ನಕಲಿ ಪಿಎಸ್ ಐ ಆಟ ಬಯಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!