ಮಂಗಳೂರು: mr_a_titude ಎಂಬ ಇನ್‌ಸ್ಟಾಗ್ರಾಂ ಪೇಜ್ ಮೂಲಕ ಪ್ರಚೋದನಕಾರಿ ಹಾಗೂ ಪೊಲೀಸರ ವಿರುದ್ಧ ಅವಮಾನಕಾರಿ ಸಂದೇಶಗಳನ್ನು ಹರಿಬಿಟ್ಟ ಆರೋಪದ ಮೇರೆಗೆ ಮಂಗಳೂರು ನಗರದ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿತನನ್ನು ಬಂಧಿಸಲಾಗಿದೆ.

ಆರೋಪಿತನನ್ನು ಅಭಿಷೇಕ್ ಎಂ. (23) ಎಂದು ಗುರುತಿಸಲಾಗಿದ್ದು, ತಂದೆ ಮುರಳಿಧರ, ಕಾಟಿಪಾಳ್ಯ, ಮಂಗಳೂರು ನಿವಾಸಿ. ಈತನ ವಿರುದ್ಧ ಅ.ಕ್ರ. 84/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 189 ಹಾಗೂ 353(1), 353(2), 56, 57ರಂತೆ ಪ್ರಕರಣ ದಾಖಲಿಸಲಾಗಿದೆ.

mr_a_titude ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಪೊಲೀಸರು “ರಾಜ ಅತಿಥ್ಯ” ನೀಡುತ್ತಿದ್ದಾರೆ, ನಿಸರ್ಗ ಹೋಟೆಲ್‌ನಿಂದ ಪ್ರತಿದಿನ ಬೀಫ್ ಊಟ ಒದಗಿಸಲಾಗುತ್ತಿದೆ ಎಂಬ ಸುಳ್ಳು ಹಾಗೂ ಪ್ರಚೋದನಕಾರಿ ಆರೋಪಗಳನ್ನು ಪೋಸ್ಟ್ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಅವಿಶ್ವಾಸ ಮೂಡಿಸುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ 08-05-2025 ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಮಂಗಳೂರು ನಗರದ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆ ಕೈಗೊಂಡಿದೆ. ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿತನನ್ನು ಪತ್ತೆಹಚ್ಚಿ ಬಂಧಿಸಿ, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಆರೋಪಿತನ ವಿರುದ್ಧ ಈ ಹಿಂದೆ ಕೂಡ ಗಂಭೀರ ಪ್ರಕರಣಗಳು ದಾಖಲಾಗಿವೆ.

ಸುರತ್ಕಲ್ ಪೊಲೀಸ್ ಠಾಣೆ ಅ.ಕ್ರ. 11/2021 – ಕೊಲೆಯತ್ನ

ಸುರತ್ಕಲ್ ಪೊಲೀಸ್ ಠಾಣೆ ಅ.ಕ್ರ. 137/2021 – ಹಲ್ಲೆ

ಸುರತ್ಕಲ್ ಪೊಲೀಸ್ ಠಾಣೆ ಅ.ಕ್ರ. 62/2022 – ಕೊಲೆ

ಕಾಪು ಪೊಲೀಸ್ ಠಾಣೆ ಅ.ಶ್ರ. 62/2024 – ದರೋಡೆ


ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!