ಬಾಡಿಗೆ ಹಣದ ವಿಚಾರವಾಗಿ ಮನೆ ಮಾಲಕಿ ಮತ್ತು ಬಾಡಿಗೆದಾರರ ನಡುವೆ ನಡೆದ ವಿವಾದವೊಂದು ವಿಕೋಪಕ್ಕೆ ತಿರುಗಿ, ಬಾಡಿಗೆಗಿದ್ದ ದಂಪತಿ ಮನೆಯ ಮಾಲೀಕಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟಿರುವ ಭೀಕರ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಬಾಡಿಗೆದಾರರಿಂದ ಹತ್ಯೆಗೊಳಗಾದ ಮಹಿಳೆಯನ್ನು ದೀಪ್‌ಶಿಖಾ ಶರ್ಮಾ (33) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ:

ದೀಪ್‌ಶಿಖಾ ಶರ್ಮಾ ಮತ್ತು ಪತಿ ಉಮೇಶ್ ಶರ್ಮಾ ಗಾಜಿಯಾಬಾದ್‌ನ ರಾಜನಗರ ಎಕ್ಸ್‌ಟೆನ್ಶನ್‌ನಲ್ಲಿರುವ ‘ಆರಾ ಚೈಮೆರಾ’ ಸೊಸೈಟಿಯಲ್ಲಿ ವಾಸವಾಗಿದ್ದಾರೆ. ಈ ದಂಪತಿ ಅದೇ ಸೊಸೈಟಿಯಲ್ಲಿ ಮತ್ತೊಂದು ಫ್ಲಾಟ್ ಹೊಂದಿದ್ದು, ಅದನ್ನು ಅಜಯ್ ಗುಪ್ತಾ ಮತ್ತು ಆಕೃತಿ ಗುಪ್ತಾ ಎಂಬ ದಂಪತಿಗೆ ಬಾಡಿಗೆಗೆ ನೀಡಿದ್ದರು. ಆದರೆ ಬಾಡಿಗೆದಾರರು ಕಳೆದ ಐದು ಆರು ತಿಂಗಳುಗಳಿಂದ ಬಾಡಿಗೆ ನೀಡಿಲ್ಲ ಎನ್ನಲಾಗಿದೆ ಇದೇ ವಿಚಾರವಾಗಿ ಮಾಲಕಿ ದೀಪ್‌ಶಿಖಾ ಅವರು ಬುಧವಾರ ಸಂಜೆ (ಡಿ.17) ಬಾಡಿಗೆಗೆ ಇರುವ ದಂಪತಿ ಬಳಿ ಬಾಡಿಗೆ ಕೇಳಲು ತೆರಳಿದ್ದಾರೆ ಈ ವೇಳೆ ಮಾಲಕಿ ಹಾಗೂ ದಂಪತಿಗಳ ನಡುವೆ ಬಾಡಿಗೆ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ ಬಳಿಕ ಇದು ವಿಕೋಪಕ್ಕೆ ತಿರುಗಿದ್ದು ಈ ವೇಳೆ ಬಾಡಿಗೆಗಿದ್ದ ದಂಪತಿ ಮಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಬಳಿಕ ಭಯಗೊಂಡ ಅವರು ವಿಚಾರ ಹೊರ ಬರಬಾರದೆಂದು ಶವವನ್ನು ಮನೆಯಲ್ಲಿದ್ದ ಸೂಟ್‌ಕೇಸ್‌ ಒಂದಕ್ಕೆ ತುಂಬಿ ಅದನ್ನ ಬೆಡ್ ರೂಮ್ ನಲ್ಲಿರುವ ಮಂಚದ ಕೇಳದೆ ಬಚ್ಚಿಡುತ್ತಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ:

ಇನ್ನು ಮನೆ ಮಾಲಕಿ ಸಂಜೆ ಮನೆಯಿಂದ ಹೊರ ಹೋದವರು ರಾತ್ರಿಯಾದರೂ ಮನೆಗೆ ಬಂದಿರದೆ ಇರುವುದನ್ನು ಕಂಡು ಆತಂಕಗೊಂಡ ಮನೆ ಕೆಲಸದಾಕೆ ಹುಡುಕಾಟ ನಡೆಸಿದ್ದಾರೆ ಆದರೆ ಎಲ್ಲೂ ಪತ್ತೆಯಾಗಿಲ್ಲ ಬಳಿಕ ಫ್ಲಾಟ್ ನಲ್ಲಿರುವವರ ಬಳಿ ವಿಚಾರಿಸಿದ್ದಾರೆ ಆದರೂ ಎಲ್ಲೂ ಪತ್ತೆಯಾಗಿಲ್ಲ ಬಳಿಕ ಫ್ಲಾಟ್ ನಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಪಕ್ಕದ ಫ್ಲಾಟ್ ಗೆ ಹೋಗಿರುವುದು ಕಂಡುಬಂದಿದೆ ಆದರೆ ವಾಪಸ್ಸು ಬಂದಿದ್ದು ಮಾತ್ರ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ ಇದರಿಂದ ಅನುಮಾನಗೊಂಡ ಮನೆ ಕೆಲಸದಾಕೆ ಬಾಡಿಗೆ ನೀಡಿದ ದಂಪತಿ ರೂಮ್ ಗೆ ಹೋಗಿ ವಿಚಾರಿಸಿದ್ದಾರೆ ಈ ವೇಳೆ ದಂಪತಿ ಭಯದಿಂದ ಉತ್ತರ ನೀಡುತ್ತಿರುವುದು ಅನುಮಾನ ಹುಟ್ಟಿಸಿದೆ ಬಳಿಕ ಮನೆಯನ್ನು ಪರಿಶೀಲನೆ ನಡೆಸಿದ ವೇಳೆ ಬೆಡ್ ರೂಮ್ ನ ಮಚದ ಕೆಳಗೆ ಕೆಂಪು ಬಣ್ಣದ ಸೂಟ್‌ಕೇಸ್‌ ಪತ್ತೆಯಾಗಿದೆ ಅದನ್ನು ಪರಿಶೀಲನೆ ನಡೆಸಿದ ವೇಳೆ ಸೂಟ್‌ಕೇಸ್‌ ಒಳಗೆ ಮಾಲಕಿಯ ಶವ ಪತ್ತೆಯಾಗಿದೆ.

ಪೊಲೀಸರಿಂದ ತನಿಖೆ:

ಮಾಲಕಿಯ ಶವ ಪತ್ತೆಯಾಗುತ್ತಿದ್ದಂತೆ ಮನೆ ಕೆಲಸದಾಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಡಿಗೆ ಮನೆಯನ್ನು ಪರಿಶೀಲನೆ ನಡೆಸಿ ಮನೆಯೊಳಗಿದ್ದ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿ ಹಂತಕ ದಂಪತಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಈ ವೇಳೆ ದಂಪತಿಗಳು ಬಾಡಿಗೆ ವಿಚಾರಕ್ಕೆ ನಮ್ಮ ಹಾಗೂ ಮಾಲಕಿಯ ನಡುವೆ ವಾಗ್ವಾದ ನಡೆದು ಕೊನೆಗೆ ನಾವು ಈ ನಿರ್ಧಾರಕ್ಕೆ ಬಂದು ಶವವನ್ನು ಸೂಟ್‌ಕೇಸ್‌ ನಲ್ಲಿ ಬಚ್ಚಿಟ್ಟೆವು ಎಂದು ಒಪ್ಪಿಕೊಂಡಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಉಪಾಸನಾ ಪಾಂಡೆ, ಪ್ರಾಥಮಿಕ ತನಿಖೆಯ ಪ್ರಕಾರ ಇದು ಉಸಿರುಗಟ್ಟಿಸಿ ಮಾಡಿದ ಕೊಲೆಯಂತೆ ಕಂಡುಬರುತ್ತಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೃತರ ಕುಟುಂಬದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!