ತಡರಾತ್ರಿ ರಸ್ತೆಯಲ್ಲಿ ಒಂಟಿಯಾಗಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಯುವತಿಗೆ ಪುಂಡರ ಗುಂಪೊಂದು ಕಿರುಕುಳ ನೀಡಿರುವ ಘಟನೆ (Crime news) ಬೆಂಗಳೂರಿನಲ್ಲಿ ನಡೆದಿದೆ. ಒಂದೇ ಬೈಕ್‌ನಲ್ಲಿದ್ದ ಮೂವರಿಂದ ಯುವತಿಗೆ ಕಿರುಕುಳ ನೀಡಲಾಗಿದ್ದು, ಸುಮಾರು ಎರಡು ಕಿಲೋಮೀಟರ್ ರಸ್ತೆಯುದ್ದಕ್ಕೂ ಪುಂಡರು ಆಕೆಯನ್ನು ಹಿಂಬಾಲಿಸಿದ್ದಾರೆ.

ಡಿ.25 ರ ರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಕ್ರಿಸ್‌ಮಸ್‌ ದಿನದ ರಾತ್ರಿ ಬಿಟಿಎಂ ಲೇಔಟ್ ನಲ್ಲಿ ಯುವತಿಯೋರ್ವಳು ತನ್ನ ಪಾಡಿಗೆ ರಸ್ತೆಯಲ್ಲಿ ಸಾಗುತ್ತಿದ್ದಳು. ಇದೇ ವೇಳೆ ಮೂವರು ಕಿಡಿಗೇಡಿಗಳು ಒಂದೇ ಬೈಕ್‌ ನಲ್ಲಿ ಟ್ರಿಪಲ್‌ ರೈಡ್‌ ಮಾಡುತ್ತಾ., ಹೆಲ್ಮೆಟ್‌ ಸಹ ಧರಿಸದೆ ಯುವತಿಗೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡುವ ಮೂಲಕ ಕಿರುಕುಳ ನೀಡಿದ್ದರು.

ಉದ್ದೇಶ ಪೂರ್ವಕವಾಗಿ ಆಕೆಯ ಬೈಕ್‌ ಗೆ ಅಡ್ಡ ಹೋಗಿ ರಸ್ತೆಯಲ್ಲಿ ಆತಂಕ ಉಂಟಾಗುವಂತೆ ಮಾಡಿದ್ದರು. ಹಿಂದೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವರು ಇದನ್ನು ತಮ್ಮ ಮೊಬೈಲ್‌ ನಲ್ಲಿ ಚಿತ್ರೀಕರಿಸಿದ್ದರು. ಬಳಿಕ ಎಕ್ಸ್‌ ನಲ್ಲಿ ಇದನ್ನು ಪೋಸ್ಟ್‌ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾರೆ.

ಬೆಂಗಳೂರು ಪೊಲೀಸರು ಇದಕ್ಕೆ ಉತ್ತರ ನೀಡಿದ್ದು, ಬೈಕ್‌ ನಂಬರ್ ಪತ್ತೆ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!