ಪುತ್ತೂರು ಸಮೀಪದ ಸಾಲ್ಮರ ಸೈಯ್ಯದ್‌ ಮಲೆ ಮಸೀದಿಯ ವಠಾರದಲ್ಲಿ ಅಂತ್ಯವಿಶ್ರಮ ಹೊಂದಿರುವ ಅಬ್ದುಲ್‌ ಸಲಾಂ ತಂಬಳ್‌ ಅವರ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್‌ ಸಮಾರೋಪ ಸಮಾರಂಭ ಹಾಗೂ ಧಾರ್ಮಿಕ ಮತಪ್ರವಚನ–ಸೂಫಿ ಗಾನ ಕಾರ್ಯಕ್ರಮವು ಜ.4ರಂದು ಸಂಜೆ 5.07ಕ್ಕೆ ಪಿ.ಎಸ್. ಅಹಮದ್‌ ಊರಮಾಲ್‌ ವೇದಿಕೆಯಲ್ಲಿ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಸೈಯ್ಯದ್‌ ಶಫಿವುಲ್ಲಾ  ತಂಙಳ್ ಬುಖಾರಿ (ಮಣ್ಣಾರ್ಕಾಡ್‌) ದುವಾ ಆಶೀರ್ವಚನ ನೀಡಲಿದ್ದು, ಅಸ್ಲಮ್‌ ಅಝರಿ ಪೋಯ್ತುಂಕಡವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುಹಮ್ಮದ್‌ ತಂಬಳ್‌ ಸಾಲ್ಮರ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಾಲ್ಮರ ಸೈಯ್ಯದ್‌ ಮಲೆ ಜಮಾತ್‌ ಕಮಿಟಿಯ ಅಧ್ಯಕ್ಷ ಸಂಶುದ್ದೀನ್‌ ಸಾಲ್ಮರ ವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಲಿರಾರ್‌ (ಲಕ್ಷದ್ವೀಪ) ಅವರಿಂದ ಸೂಫಿ ಗಾನ ನಡೆಯಲಿದೆ. ಮಧ್ಯಾಹ್ನ 12ರಿಂದ ರಾತ್ರಿ ತನಕ ಸಾರ್ವಜನಿಕ ಅನ್ನದಾನ ವ್ಯವಸ್ಥೆ ಇರಲಿದೆ. ಬೆಳಿಗ್ಗೆ 11ರಿಂದ ಕೂಟು ಝೀಯಾರತ್ ನಡೆಯಲಿದ್ದು, ಅದರ ನೇತೃತ್ವವನ್ನು ಎಸ್.ಎಂ. ತಂಬಳ್‌ ಸಾಲ್ಮರ, ಅಲ್‌ ಹಾದಿ ಅಬೂಬಕ್ಕರ್‌ ತಂಙಳ್ (ಕೆಮ್ಮಾಯಿ) ಹಾಗೂ ಅಲ್‌ ಹಾಜಿ ಉಮ್ಮರ್‌ ದಾರಿಮಿ ಸಾಲ್ಮರ ವಹಿಸಲಿದ್ದಾರೆ ಎಂದು ಸಾಲ್ಮರ ಸೈಯ್ಯದ್‌ ಮಲೆ ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ಸಂಶುದ್ದೀನ್‌ ಸಾಲ್ಮರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!