ಪುತ್ತೂರು: ಕಾಲೇಜು ವಿದ್ಯಾರ್ಥಿ ಕೃಷ್ಣ ಜೆ. ರಾವ್ ಯುವತಿಗೆ ಮಗುಭಾಗ್ಯ ಕರುಣಿಸಿದ ವಿಚಾರದಲ್ಲಿ ಪುತ್ತೂರಿನ ಬಿಜೆಪಿ ಹಾಗೂ ಸಂಘ ಪರಿವಾರದ ನಕಲಿ ಹಿಂದುತ್ವದ ಮುಖ ಕಳಚಿಬಿದ್ದಿದೆ. ಹಿಂದು ಹೆಣ್ಣುಮಗಳಿಗೆ ನ್ಯಾಯ ಕೊಡಿಲಾಗದ ಅವರ ಮನೋಸ್ಥಿತಿ ಇದೀಗ ಜಗಜ್ಜಾಹೀರುಗೊಂಡಿದೆ. ಇನ್ನು ಮುಂದೆ ಹಿಂದುತ್ವದ ಸಿದ್ಧಾಂತದ ಪ್ರತಿಪಾದನೆ ಮಾಡುವುದಿಲ್ಲ ಎಂದು ಅವರು ಹೇಳಬೇಕು. ಇಲ್ಲವಾದರೆ ಈ ಹೆಣ್ಣುಮಗಳಿಗೆ ನ್ಯಾಯ ಕೊಡಿಸಬೇಕು. ಮುಸ್ಲಿಂ ಆರೋಪಿಯಾದಾಗ ಮಾತ್ರ ನಾವು ಹಿಂದುತ್ವದ ಬಗ್ಗೆ ಮಾತನಾಡುತ್ತೇವೆ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಎಸ್‌ಡಿಪಿಐ ಇಲ್ಲವಾದರೆ ವಂಚನೆಗೊಳಗಾದ ಈ ಯುವತಿ ಪರ ವಿಧಾನಸೌಧದ ಮುಂದೆ ಈ ಕುಟುಂಬ ಸಹಿತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಅವರು ಮಾತನಾಡಿ, ತಾನೇ ಇಷ್ಟಪಟ್ಟ ಯುವತಿಗೆ ಮಗು ಕೊಟ್ಟು ಈಗ ಮದುವೆ ಸಾಧ್ಯವೇ ಇಲ್ಲ ಎಂದು ಹೇಳುವ ಕೃಷ್ಣ ಜೆ.ರಾವ್ ಬಗ್ಗೆ ಯಾವ ಬಿಜೆಪಿ ಸಂಘಪರಿವಾರಗಳು ಮಾತನಾಡುತ್ತಿಲ್ಲ. ಮುಸ್ಲಿಂ ಯುವಕ ಆರೋಪಿಯಾಗಿದ್ದರೆ, ಇದೀಗ ದೈವ ಮೈಮೇಲೆ ಬಂದವರAತೆ ವರ್ತಿಸುವ ಅರುಣ್ ಕುಮಾರ್ ಪುತ್ತಿಲ, ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಸಿ.ಟಿ ರವಿ, ಯತ್ನಾಳ್, ಶೋಭಾ ಕರಂದ್ಲಾಜೆ ಪ್ರಮೋದ್ ಮುತಾಲಿಕ್ ಈ ಮೌನಾಚರಣೆ ಮಾಡುತ್ತಿದ್ದಾರೆ. ಇವರಿಗೆ ಹಿಂದುತ್ವ ನೆನಪಾಗುವುದು ಮುಸ್ಲಿಂ ಆರೋಪಿದಾಗ ಮಾತ್ರ. ಈ ಹಿಂದುತ್ವದ ನಾಟಕ ಈಗ ಎಲ್ಲರಿಗೂ ಅರ್ಥವಾಗಿದೆ. ಹಿಂದೂ ಹುಡುಗಿಗೆ ಆದ ಅನ್ಯಾಯ ಇವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಡಿಎನ್‌ಎ ಪರೀಕ್ಷೆಯಲ್ಲೂ ಕೃಷ್ಣ ರಾವ್ ಮಗುವಿನ ತಂದೆ ಎಂಬುವುದು ಸ್ಪಷ್ಟವಾಗಿದೆ. ವಿವೇಕಾನಂದರ ಹೆಸರಲ್ಲಿ ಸಂಸ್ಕೃತಿ-ರಾಷ್ಟಿçÃಯತೆಯ ಪಾಠ ಮಾಡುವ  ಕಾಲೇಜು ವಿವೇಕಾನಂದರ ಆದರ್ಶವನ್ನು ಒಂದಿನಿತೂ ಪಾಲಿಸುತ್ತಿದ್ದರೂ ಈತ ಕಾಲೇಜಿನಿಂದ ಡಿಬಾರ್ ಆಗುತ್ತಿದ್ದ. ಕಾಲೇಜಿನ ಆಡಳಿತ ವ್ಯವಸ್ಥೆ ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ನೀಡುತ್ತದೆ ಎಂಬುವುದು ಇದರಿಂದ ಅರ್ಥವಾಗುತ್ತಿದೆ. ಇವರ ಸಂಸ್ಕೃತಿಯ ಪಾಠ ಯಾರಿಗೆ ಎಂದು ಅನ್ವರ್ ಸಾದಾತ್ ಪ್ರಶ್ನಿಸಿದರು.
ವಿಧಾನ ಸೌಧ ಎದುರು ಪ್ರತಿಭಟನೆ:
ಉಪಾಧ್ಯಕ್ಷ ಮೋನಿಷ್ ಆಲಿ ಮಾತನಾಡಿ, ಮಗು ಹೆತ್ತು ಕಂಗಾಲಾದ ಕುಟುಂಬಕ್ಕೆ ಯಾರ ನೆರವೂ ಸಿಗದಿದ್ದಾಗ ಎಸ್‌ಡಿಪಿಐ ಈ ಕುಟುಂಬದ ಪರ ನಿಂತು ಪ್ರತಿಭಟನೆ ಮಾಡಿತ್ತು. ಸಂತ್ರಸ್ತೆಯ ತಾಯಿಯೂ ಇದರಲ್ಲಿ ಪಾಲ್ಗೊಂಡಿದ್ದರು. ಆಗ ಎಚ್ಚರಿಕೆಯಾದ ಹಿಂದೂ ಮುಖಂಡರು ಹಿಂದೂ ಹುಡುಗಿಗೆ ಆದ ಅನ್ಯಾಯದ ಬಗ್ಗೆ ಎಸ್‌ಡಿಪಿಐ ತಲೆ ಹಾಕುವ ಅಗತ್ಯವಿಲ್ಲ. ನಾವಿದ್ದೇವೆ ಎಂದು ಹೇಳಿದ್ದರು. ಹಾಗಾಗಿ ನಾವು ಸುಮ್ಮನಾಗಿದ್ದೆವು. ಆದರೆ ಈಗ ೫೦ ಲಕ್ಷ ಕೊಡುತ್ತೇವೆ. ಮದುವೆಯಾದ ತಕ್ಷಣ ಡೈವೋರ್ಸ್ ಕೊಡಬೇಕು ಎಂದು ಯುವಕನ ಕುಟುಂಬ ಷರತ್ತು ವಿಧಿಸುತ್ತಿರುವಾಗ ಎಲ್ಲಿದ್ದಾರೆ ಹಿಂದೂ ಮುಖಂಡರು. ೬ ತಿಂಗಳ ಕಳೆದರೂ ಆಕೆಗೆ ನ್ಯಾಯ ಸಿಕ್ಕಿಲ್ಲ. ಇದೀಗ ಮತ್ತೆ ಎಸ್ ಡಿಪಿಐ ಸಂತ್ರಸ್ತೆ ಪರ ಹೋರಾಟಕ್ಕೆ ಇಳಿಯಲಿದೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ಜತೆಗೆ ಬೆಂಗಳುರಿನ ವಿಧಾನಸೌಧದ ಮುಂದೆಯೂ ನಾವು ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ  ಪಕ್ಷದ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಪುತ್ತೂರು ಕ್ಷೇತ್ರ ಅಧ್ಯಕ್ಷ ಅಶ್ರಫ್ ಬಾವಾ, ಜತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸುಳ್ಯ ಕ್ಷೇತ್ರದ ಮುಖಂಡ ಬಾಬು ಸವಣೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!