ಬಂಟ್ವಾಳ, ಜ.16: ಐಕ್ಯ ವೇದಿಕೆ ಕೊಡಾಜೆ ಇದರ ಆಶ್ರಯದಲ್ಲಿ ರಾಜ್ಯಮಟ್ಟದ ದಫ್ ಸ್ಪರ್ಧೆ, ನೂತನ ಕಚೇರಿ ಉದ್ಘಾಟನೆ, ಸನ್ಮಾನ ಹಾಗೂ ಐಕ್ಯತಾ ಜಸ್ನೇ-2026 ಕಾರ್ಯಕ್ರಮವು ಜ.18 ರಂದು ಕೊಡಾಜೆ ತರ್ಬಿಯತುಲ್ ಇಸ್ಲಾಮ್ ಮದ್ರಸ ವಠಾರದ ಮರ್ಹೂಮ್ ಸುಲ್ತಾನ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 10ಕ್ಕೆ ಕೊಡಾಜೆ ಜಂಕ್ಷನ್‌ನಲ್ಲಿ ವೇದಿಕೆಯ ನೂತನ ಕಚೇರಿಯನ್ನು ಅಸ್ಟೈಯದ್ ಇಬ್ರಾಹೀಂ ಹಂಝ ಅಲ್‌ಹಾದಿ ತಂಬಳ್ ಪಾಟ್ರಕೋಡಿ ಉದ್ಘಾಟಿಸಲಿದ್ದು, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸುವರು. ಅಪರಾಹ್ನ 3ಕ್ಕೆ ಐಕ್ಯತಾ ಜಸ್ಸೇ ಕಾರ್ಯಕ್ರಮವನ್ನು ಪರ್ಲೊಟ್ಟು ಅಬೂಬಕರ್ ಸಿದ್ದೀಕ್ ಜುಮಾ ಮಸೀದಿಯ ಖತೀಬ್ ಸೈದಾಲಿ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಐಕ್ಯ ವೇದಿಕೆ ಉಪಾಧ್ಯಕ್ಷ ಅಬ್ದುಲ್ ರಝಾಕ್ ಅನಂತಾಡಿ ಅಧ್ಯಕ್ಷತೆ ವಹಿಸುವರು.
ಸಂಜೆ 6:30ಕ್ಕೆ ನಡೆಯುವ ರಾಜ್ಯಮಟ್ಟದ ದಫ್ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ನಲ ಉದ್ಘಾಟಿಸಲಿದ್ದು, ಐಕ್ಯ ವೇದಿಕೆ ಅಧ್ಯಕ್ಷ ಅಶ್ರಫ್ ಭಾರತ್ ಅಧ್ಯಕ್ಷತೆ ವಹಿಸುವರು.
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಸೋಮನಾಥ್ ಪಂಡಿತ್, ಕಲ್ಲಡ್ಕ ಮ್ಯೂಸಿಯಂ ಮಾಲಕ ಹಾಜಿ ಕೆ.ಎಸ್.ಯಾಸಿರ್ ಕಲ್ಲಡ್ಕ ಮತ್ತು ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆಯವರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!