ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಮಾಯ್ ದೆ ದೇವುಸ್ ಚರ್ಚ್‌ನ 2026–28ನೇ ಸಾಲಿನ ಚರ್ಚ್ ಪಾಲನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚರ್ಚ್‌ನ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನಸ್ ಅವರ ನೇತೃತ್ವದಲ್ಲಿ ಚರ್ಚ್ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಚರ್ಚ್ ಪಾಲನಾ ಸಮಿತಿಯ ಅಧ್ಯಕ್ಷರಾಗಿ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನಸ್, ಉಪಾಧ್ಯಕ್ಷರಾಗಿ ರೋಶನ್ ಲಸ್ರಾದೊ (ಮಿತ್ತೂರು), ಕಾರ್ಯದರ್ಶಿಯಾಗಿ ಸಿಲ್ವಿಯಾ ನಿರ್ಮಲ ಮೊರಾಸ್ (ಪರ್ಲಡ್ಕ), ವಲಯ ಪ್ರತಿನಿಧಿಯಾಗಿ ಕ್ಷಮೆಂಟ್ ಪಿಂಟೊ (ನಿತ್ಯಾಧಾರ್) ಹಾಗೂ ಚರ್ಚ್ ಆಯೋಗಗಳ ಸಂಯೋಜಕರಾಗಿ ಪೌಲ್ ಹೆರಾಲ್ಡ್ ಮಸ್ಕರೇನಸ್ (ಪಾಂಗ್ಲಾಯಿ) ಅವರನ್ನು ಆಯ್ಕೆ ಮಾಡಲಾಯಿತು.
ಚರ್ಚ್ ಆರ್ಥಿಕ ಸಮಿತಿ:
ಆರ್ಥಿಕ ಸಮಿತಿಯ ಅಧ್ಯಕ್ಷರಾಗಿ ವಂ| ಲಾರೆನ್ಸ್ ಮಸ್ಕರೇನಸ್, ಉಪಾಧ್ಯಕ್ಷರಾಗಿ ರೋಶನ್ ಲಸ್ರಾದೊ, ಕಾರ್ಯದರ್ಶಿಯಾಗಿ ಸಿಲ್ವಿಯಾ ನಿರ್ಮಲ ಮೊರಾಸ್ ಅವರನ್ನು ನೇಮಕ ಮಾಡಲಾಯಿತು. ಸದಸ್ಯರಾಗಿ ಚರ್ಚ್‌ನ ಸಹಾಯಕ ಧರ್ಮಗುರು ವಂ| ಮರ್ವಿನ್ ಪ್ರವೀಣ್ ಲೋಬೋ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ| ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ವಂ| ಮ್ಯಾಕ್ಸಿಂ ಡಿ’ಸೋಜ ಸೇರಿದಂತೆ ಜೋಯಲ್ ಜೋಸೆಫ್ ಕುಟಿನ್ನಾ, ಓಸ್ಟಲ್ ಲೋಬೋ, ವಿಕ್ಟರ್ ಪಾಯ್ಸ್, ಲುವಿಸ್ ಡಿ’ಸೋಜ, ರಾಕೇಶ್ ಜಿ. ಮಸ್ಕರೇನಸ್ ಹಾಗೂ ದೊರೊತಿ ಮಿನೇಜಸ್ ಅವರನ್ನು ಆಯ್ಕೆ ಮಾಡಲಾಯಿತು.
ವಾರ್ಡ್ ಪ್ರತಿನಿಧಿಗಳು:
ಚರ್ಚ್ ವ್ಯಾಪ್ತಿಯ 19 ವಾರ್ಡ್‌ಗಳಿಂದ ಆಯ್ಕೆಯಾದ ಗುರಿಕಾರರು ಪಾಲನಾ ಸಮಿತಿಯ ಸದಸ್ಯರಾಗಿದ್ದಾರೆ. ವಿವಿಧ ವಾರ್ಡ್‌ಗಳಿಂದ ಆಂಬೋಸ್ ಡಿ’ಸೋಜ, ಮೌಲಸ್ ಮೊಂತೆರೊ, ವಿವಿನ್ ಡಿ’ಸೋಜ, ಸುನಿತಾ ಪೋನ್‌ಕಾ, ಪ್ರೆಸಿಲ್ಲಾ ಮಸ್ಕರೇನಸ್, ಜೊಯಲ್ ಜೋಸೆಫ್ ಕುಟಿನ್ನಾ, ದೊರೊತಿ ಮಿನೇಜಸ್, ಜೋನ್ ಡಿ’ಸೋಜ, ರಿಚರ್ಡ್ ರೆಬೆಲ್ಲೊ, ಓಸ್ಟಲ್ ಲೋಬೋ, ಜೆಸಿಂತ ಡಿ’ಸೋಜ, ಬೊನಿಫಾಸ್ ಡಿ’ಸೋಜ, ಶಾಂತಿ ಡಿ’ಸೋಜ, ವಿಕ್ಟರ್ ಪಾಯ್ಸ್, ಪಾನ್ಸ್ ಜೆರಾಲ್ಡ್ ಮಸ್ಕರೇನಸ್, ಲೊರೆಟ್ಟಾ ಡಾಯಸ್, ಫಿಲೋಮಿನಾ ಕ್ರಾಸ್ತಾ, ಲವಿನಾ ಪ್ರಸನ್ನಾ ಹಾಗೂ ಝೀನಾ ಗೊವಿಯಸ್ ಸದಸ್ಯರಾಗಿದ್ದಾರೆ.
ಶಿಕ್ಷಣ ಹಾಗೂ ಸಂಘಟನೆಗಳ ಪ್ರತಿನಿಧಿಗಳು:
ಶಾಲಾ ಪ್ರತಿನಿಧಿಗಳಾಗಿ ಸಂತ ಎಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಹ್ಯಾರಿ ಡಿ’ಸೋಜ, ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್‌ನಿಂದ ಜೋನ್ಸನ್ ಡೇವಿಡ್ ಸಿಕ್ಕೇರ ಹಾಗೂ ಬೆಥನಿ ಶಿಕ್ಷಣ ಸಂಸ್ಥೆಯಿಂದ ಸಿಸ್ಟರ್ ಅನಿತಾ ಟ್ರಸ್ಸಿ ಪಾಯ್ಸ್ ಅವರನ್ನು ಆಯ್ಕೆ ಮಾಡಲಾಯಿತು.
ಚರ್ಚ್ ಸಂಘಟನೆಗಳ ಮುಖ್ಯಸ್ಥರಾಗಿ ಶಾಂತಿ ಮೊರಾಸ್, ವಿಲ್ಟಾಸಿದ್ದೀರ್, ಐರಿನ್ ಮಾಡ್ತಾ, ಸೈಮನ್ ಡಿ’ಸೋಜ, ಡಿಂಪಲ್ ಫೆರ್ನಾಂಡಿಸ್, ಸುಶಾಂತ್ ವೇಗಸ್, ನರೇಶ್ ಲೋಬೋ ಹಾಗೂ ಕ್ಷಮೆಂಟ್ ಪಿಂಟೊ ಅವರನ್ನು ನೇಮಕ ಮಾಡಲಾಯಿತು.
ಪ್ರಮಾಣವಚನ:
ನೂತನ ಪದಾಧಿಕಾರಿಗಳಿಗೆ ಡಿಸೆಂಬರ್ 31ರಂದು ಚರ್ಚ್‌ನಲ್ಲಿ ನಡೆದ ದಿವ್ಯ ಬಲಿಪೂಜೆ ಸಂದರ್ಭದಲ್ಲಿ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನಸ್ ಅವರು ಪ್ರಮಾಣವಚನ ಬೋಧಿಸಿದರು. ಚರ್ಚ್ ಪಾಲನಾ ಸಮಿತಿಯಲ್ಲಿ ಒಟ್ಟು 74 ಮಂದಿ ಸದಸ್ಯರಿದ್ದು ಈ ಸಮಿತಿಯ ಅಧಿಕಾರಾವಧಿ 2028ರ ಡಿಸೆಂಬರ್ 31ರವರೆಗೆ ಇರಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!